Breaking News

ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಬೌಲರ್ ಗಳಿಂದ ಹೊಸ ದಾಖಲೆ.

ಮೊಹಾಲಿ : ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ ಬೌಲರ್ ಗಳು ಹೊಸ ದಾಖಲೆ ಮಾಡಿದ್ದಾರೆ. 7,8,9 ನೇ ಕ್ರಮಾಂಕದಲ್ಲಿ ಆಡಿದ ಅಶ್ವಿನ್, ರವೀಂದ್ರ ಜಡೇಜ ಹಾಗೂ ಜಯಂತ್ ಯಾದವ್ ಮೂವರೂ 50 ಕ್ಕೂ ಹೆಚ್ ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. 
ಭಾರತದ 84 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 7,8.ಹಾಗೂ 9 ನೆ ಕ್ರಮಾಂಕದಲ್ಲಿ ಆಡಿದ ಮೂವರು ಆಟಗಾರರು ಒಂದೇ ಇನ್ನಿಂಗ್ಸ್ ನಲ್ಲಿ 50 ಕ್ಕಿಂತ ಹೆಚ್ಚು ಗಳಿಸಿರಲಿಲ್ಲ.
ಮೊಹಾಲಿ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಅಶ್ವಿನ್ 72(113), ರವೀಂದ್ರ ಜಡೇಜ 90 (170) ಹಾಗೂ ಯಾದವ್ 55 (141) ರನ್ ಗಳಿಸಿದ್ದರು.

No comments