Breaking News

ವಂಚಕ ಪ್ರಿಯಕರ ಮನೆ ಮುಂದೆ ಧರಣಿ ಕುಳಿತ ಯುವತಿ


ಉಡುಪಿ : ಸತತ ಮೂರೂ ವರ್ಷಗಳಿಂದ ಪ್ರೀತಿಸಿ ಸುಖ ಪಡೆದು ಮದುವೆಯಾಗುವ ಭರವಸೆ ನೀಡಿದ ಪ್ರಿಯಕರ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಆತನ ಮನೆ ಧರಣಿ ನಡೆಸಿದ ಘಟನೆ ಶುಕ್ರವಾರ ಸಾಸ್ತಾನ ಸಮೀಪದ ಪಾಂಡೇಶ್ವರ ಸಮೀಪ ಯಡಬೆಟ್ಟು ಎಂಬಲ್ಲಿ ನಡೆದಿದೆ
ಮೂರು ವರ್ಷಗಳಿಂದ ಸಚಿನ್ ಎಂಬಾತನನ್ನು ನಾನು ಪ್ರೀತಿಸುತ್ತಿದ್ದು ಆ.೪ರಂದು ಮಣಿಪಾಲದ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಇಷ್ಟವಿಲ್ಲದೆಯೂ ನನ್ನ ಜೊತೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಆದರೆ ಈಗ ಆತ ನನನ್ನಿಂದ ದೂರವಾಗಲು ಯತ್ನಿಸುತ್ತಿದ್ದು, ಮೋಸ ಮಾಡಿದ್ದಾನೆ. ಈ ಬಗ್ಗೆ ನನಗಾದ ಅನ್ಯಾಯದ ವಿರುದ್ಧ ನಾನು ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ಅಲ್ಲಿನ ಪೊಲೀಸರು ರಾಜಿ ನಡೆಸಿ ಮದುವೆ ಮಾಡಿಸುವುದಾಗಿ ತಿಳಿಸಿದ್ದರೂ ಕೂಡ ಅಕ್ಟೋಬರ್ ೧೨ರಂದು ಸಚಿನ್ ಆತನ ಮನೆಯಿಂದ ಪರಾರಿಯಾಗಿದ್ದಾನೆ ಯುವತಿ ಆರೋಪಿಸಿದ್ದಾಳೆ .ಇದೀಗ ಯುವಕನ ಪೋಷಕರು ಆತನನ್ನು ತಲೆಮರೆಸಿ ಇಟ್ಟಿದ್ದಾರೆ ಎಂದು ಆರೋಪಿಸಿ ಯುವತಿ ಹುಡುಗನ ಮನೆ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾಳೆ 

No comments