Breaking News

ರಾತ್ರಿ ವೇಳೆ ಸೀರೆ ಉಟ್ಟುಕೊಳ್ಳುವ ಗಂಡ, ಪೊಲೀಸ್ ಠಾಣೆ ಮೆಟ್ಟಿಲು ಏರಿದ ಪತ್ನಿ


ಬೆಂಗಳೂರು : ಟೆಕ್ಕಿಯೊಬ್ಬ ರಾತ್ರಿ ವೇಳೆ ತನ್ನ ಹೆಂಡತಿಯ ಮುಂದೆ ಸೀರೆ ಉಟ್ಟು ವಿಚಿತ್ರವಾಗಿ ವರ್ತಿಸುವ ಗಂಡನ ವಿರುದ್ಧ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲು ಏರಿದ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ .

ಪತಿ-ಪತ್ನಿ ಇಬ್ಬರೂ ಟೆಕ್ಕಿಗಳಾಗಿದ್ದು, ಬೆಂಗಳೂರಿನ ಇಂದಿರಾನಗರದ ನಿವಾಸಿಗಳಾಗಿದ್ದಾರೆ. ಗಂಡ ಪ್ರತಿದಿನ ರಾತ್ರಿ ಸೀರೆ ಉಟ್ಟು, ಮೇಕಪ್ ಮಾಡಿಕೊಂಡು ಮಹಿಳೆಯರಂತೆ ಸಲಿಂಗ ಕಾಮಿ ( ಲೆಸ್ಬಿಯನ್ ) ತರ ವರ್ತಿಸಿ ಲೈಂಗಿಕ ಸುಖ ಪಡೆಯಲು ಪೀಡಿಸುತ್ತಾರೆ ಎಂದು ಮಹಿಳೆ ಪೊಲೀಸರಲ್ಲಿ ದೂರು ಕೊಟ್ಟಿದ್ದಾರೆ ,ಈ ಇಬ್ಬರಿಗೂ ವನಿತಾ ಸಹಾಯ ವಾಣಿಯಲ್ಲಿ ಕೌನ್ಸಿಲಿಂಗ್ ಮಾಡಲಾಗಿದ್ದು  ,ಗಂಡ ನಪುಂಸಕನಾಗಿದ್ದು ಮದುವೆ ಆಗಿ ಒಂದು ವರ್ಷ ಆದರೂ ಇಂದಿನ ವರೆಗೆ ದೈಹಿಕ ಸಂಪರ್ಕ ಹೊಂದಿಲ್ಲ ಮತ್ತು   ವಿಚ್ಛೇದನ ನೀಡುವಂತೆ ಕೇಳಿಕೊಂಡಿದ್ದಾರೆ ಸಂತ್ರಸ್ತ ಮಹಿಳೆ ಕೌನ್ಸಿಲಿಂಗ್ ವೇಳೆ ಕೇಳಿಕೊಂಡಿದ್ದಾರೆ .  ವಿಚ್ಛೇದನಕ್ಕೆ ಇಬ್ಬರು ಸಮ್ಮತಿಸಿರುವುದಾಗಿ ತಿಳಿದುಬಂದಿದೆ.

No comments