Breaking News

ಬುರ್ಕಾ ಧರಿಸಿದ್ದ ಮಸಲ್ಮಾನ ಮಹಿಳೆ ಮೇಲೆ ಧಾಳಿ ನಡೆಸಿದ ಯುವಕರು.

ಲಂಡನ್ : ಲಂಡನ್ನಿನ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಇಬ್ಬರು ಯುವಕರು ಮುಸಲ್ಮಾನ ಯುವತಿಯೊಬ್ಬಳನ್ನು ಆಕೆ ಧರಿಸಿದ್ದ ಶಿರವಸ್ತ್ರದಿಂದ ಎಳೆದು ಕೆಳಕ್ಕೆ ಬೀಳಿಸಿ ಗಾಯಗೊಳಿಸಿದ ಘಟನೆ ಜರುಗಿದೆ.
ಪೂರ್ವ ಲಂಡನ್ನಿನ ಚಿಂಗ್ ಫೋರ್ಡ್ ಎಂಬಲ್ಲಿ ಒಬ್ಬಂಟಿಯಾಗಿ ಹೋಗುತ್ತಿದ್ದ 20ರ ಹರೆಯದ ಯುವತಿಯನ್ನು ಹಿಂದಿನಿಂದ ಬಂದ ಇಬ್ಬರು ಯುವಕರು ಶಿರವಸ್ತ್ರವನ್ನು ಎಳೆದು ,ಆಕೆಯನ್ನು ನೆಲಕ್ಕೆ ದೂಡಿ ಬೀಳಿಸಿ ಪರಾರಿಯಾಗಿದ್ದಾರೆ. ಕೆಳಕ್ಕೆ ಬಿದ್ದು ಗಾಯಗೊಂಡ ಯುವತಿಗೆ ತಕ್ಷಣ ಲಂಡನ್ನಿನ ತುರ್ತು ಚಿಕಿತ್ಸಾ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿಗಳ ವಯಸ್ಸು 17 ಮತ್ತು 19 ಇರಬಹುದು ಎಂದು ಶಂಕಿಸಲಾಗಿದ್ದು ಇದುವರೆಗೆ ಬಂಧನವಾಗಿಲ್ಲ. ಪ್ರಕರಣ ದಾಖಲಿಸಿರುವ ಸ್ಥಳೀಯ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಯುಕೆಯಲ್ಲಿ ಈ ವರ್ಷ ಇಂತಹ ಮತೀಯ ದ್ವೇಷ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

No comments