Breaking News

ಶಿರವಸ್ತ್ರ ಧರಿಸದೆ ರಸ್ತೆಗಿಳಿದ ಮಹಿಳೆಯನ್ನು ಬಂಧಿಸಿದ ಸೌದಿ ಪೋಲೀಸರು.

ಸೌದಿ ಅರೇಬಿಯಾ : ಮಹಿಳೆಯೊಬ್ಬರು ಶಿರವಸ್ತ್ರ ಧರಿಸದೆ ರಸ್ತೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿ ಟ್ವಿಟ್ಟರ್'ನಲ್ಲಿ ಹಾಕಿದ ಪರಿಣಾಮ ಈಗ ಜೈಲುಪಾಲಾದ ಘಟನೆ ಸೌದಿಯ ರಿಯಾದ್ ನಗರದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫೋಟೋ ನೋಡಿದ ಹಲವರು, ಆಕೆಯ ಮೇಲೆ ಧರ್ಮನಿಂದನೆ ಕೇಸು ದಾಖಲಿಸಿ ಶಿಕ್ಷಿಸಬೇಕೆಂದು ಆಗ್ರಹಿಸಿದ್ದರು. ಬಂಧನಕ್ಕೊಳಗಾದ ಮಹಿಳೆಯನ್ನು ಮಲಕ್-ಅಲ್'ಶಹರಿ ಎಂದು ಗುರಿತಿಸಲಾಗಿದ್ದು, ಸೌದಿಯ ಧಾರ್ಮಿಕ ಪೋಲೀಸರಲ್ಲಿ ಅಧಿಕೃತ ದೂರು ದಾಖಲಾದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಸೌದಿ ಕಾನೂನಿನ ಪ್ರಕಾರ ಮಹಿಳೆಯರು ಮನೆಯಿಂದ ಹೊರಬರುವಾಗ ತಮ್ಮ ಮೈಯ್ಯನ್ನು ಸಂಪೂರ್ಣವಾಗಿ ಮುಚ್ಚಬೇಕು, ಅಪರಿಚಿತ ವ್ಯಕ್ತಿಗಳ ಜೊತೆ ಮಾತನಾಡುವಂತಿಲ್ಲ, ವಾಹನ ಚಲಾಯಿಸುವ ಹಾಗಿಲ್ಲ ಹೀಗೆ ಇನ್ನೂ ಹಲವು ಕಾನೂನುಗಳಿವೆ.

No comments