ಬಿಎಸ್ಎನ್ಎಲ್ 1 ಜಿಬಿಗೆ 36RS ?
ನವದೆಹಲಿ: ರಿಲಯನ್ಸ್ ಜಿಯೋ ಉಚಿತ ಸೇವೆ ಹಾಗೂ ಖಾಸಗಿ ವಲಯದ ಟೆಲಿಕಾಂ ಕಂಪನಿಗಳ ಅಗ್ಗದ ಸೇವೆಗೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಡ್ಡು ಹೊಡೆದಿದೆ. 3ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಶೇ.75ರಷ್ಟು ಕಡಿತಗೊಳಿಸಿರುವ ಬಿಎಸ್ಎನ್ಎಲ್ 1 ಜಿಬಿಗೆ 36 ರು.ನಷ್ಟು ಕಡಮೆ ದರಕ್ಕೆ ಡಾಟಾ ಸೇವೆ ಘೋಷಣೆ ಮಾಡಿದೆ ಮತ್ತು ಕೆಲ ಡಾಟಾಪ್ಯಾಕ್ಗಳ ಡಾಟಾವನ್ನು 4 ಪಟ್ಟು ಹೆಚ್ಚಿಸಿದೆ.
28 ದಿನ ಅವಯ 291 ರು. ಪ್ಲ್ಯಾನ್, ಇನ್ನು 2 ಜಿಬಿ ಬದಲು 8 ಜಿಬಿಗೆ ಹೆಚ್ಚಲಿದೆ. ಇದೇ ರೀತಿ 78 ರು. ಪ್ಲ್ಯಾನ್ಗೆ ಇನ್ನು 1 ಜಿಬಿ ಬದಲು 2 ಜಿಬಿ ಸಿಗಲಿದೆ. ಅಂದರೆ 1 ಜಿಬಿಗೆ 36 ರು. ದರ ವಿಸಿದಂತಾಗುತ್ತದೆ.
ಹಲವು ಖಾಸಗಿ ಕಂಪನಿಗಳು ಈಗ 50 ರು.ಗೆ 1 ಜಿಬಿ ಡಾಟಾ ನೀಡುತ್ತಿವೆ. ರಿಲಯನ್ಸ್ ಜಿಯೋ 2017ರ ಮಾ.31ರವರೆಗೆ ಉಚಿತ 4ಜಿ ಸೇವೆ ನೀಡುತ್ತಿದೆ
loading...
No comments