Breaking News

ನಕಲಿ ಪೊಲೀಸ್ ಅಪ್ಪನನ್ನು ಬಂಧಿಸಿದ ಅಸಲಿ ಪೊಲೀಸರು


ಮೈಸೂರ್ : ಪೊಲೀಸ್ ಸೋಗಿನಲ್ಲಿ ವಂಚಿಸುತ್ತಿದ್ದ ನಕಲಿ ಪೊಲೀಸ್‌ನೊಬ್ಬನನ್ನು ಕೆ.ಆರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದೇವಲಾಪುರದ ಸುಪ್ರೀತ್ ಕುಮಾರ್ ಅಲಿಯಾಸ್ ಪ್ರೀತಂ ಬಂಧಿತ ಆರೋಪಿಯಾಗಿದ್ದಾನೆ.ಆರೋಪಿಯು ಲಷ್ಕರ್ ಪೊಲೀಸ್ ಠಾಣೆಯ ಮುಖ್ಯಪೇದೆ ಎಂದು ಹೇಳಿಕೊಂಡು ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವ ಹಾಗೂ ಇಲಾಖೆಯಲ್ಲಿರುವ ಹರಾಜಿಗೆ ಬಂದ ವಾಹನ ಕಡಿಮೆ ಬೆಲೆಗೆ ಕೊಡಿಸುವುದಾಗಿ ಸಾರ್ವಜನಿಕರನ್ನು ವಂಚಿಸುತ್ತಿದ್ದನು
ನಗರದ ನಾಲಾ ಬೀದಿಯ ಶರವಣ ಎಂಬುವರಿಗೆ ವಾಹನ ಕೊಡಿಸುವುದಾಗಿ ಆರೋಪಿ ಸುಪ್ರೀತ್ ಕುಮಾರ್ ವಂಚಿಸಿದ್ದು ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನ ಬಂಧಿಸಿರುವ ಕೆ.ಆರ್.ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
loading...

No comments