Breaking News

ರಂಗೂನ್ ಸಿನಿಮಾದಲ್ಲಿ ನೈಜ ಅಭಿನಯಕ್ಕಾಗಿ ಕಂಗನಾ ರಣಾವತ್ ಮಾಡಿದ್ದೇನು ಗೊತ್ತೇ.

ಮುಂಬೈ : ಬಿ ಟೌನ್ ನ ಬೋಲ್ಡ್ ಆಂಡ್ ಗ್ಲಾಮರಸ್ ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿದ್ದಾಳೆ, ನೈಜ ಅಭಿನಯಕ್ಕಾಗಿಯೇ ಹೆಸರುವಾಸಿಯಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಇದೇ ಶುಕ್ರವಾರ ಬಿಡುಗಡೆಯಾಗಲಿರುವ 'ರಂಗೂನ್' ಚಿತ್ರದ ರೊಮ್ಯಾನ್ಸ್ ಸನ್ನಿವೇಶಕ್ಕಾಗಿ ಸಂಪೂರ್ಣ ಬೆತ್ತಲೆಯಾಗಿ ನಟಿಸಿದ್ದಾಳಂತೆ.
ರಂಗೂನ್ ಚಿತ್ರದಲ್ಲಿ ಶಾಹೀದ್ ಕಪೂರ್ ಜೊತೆ ಇರುವ ರೊಮ್ಯಾಂಟಿಕ್ ದೃಷ್ಯವೊಂದರಲ್ಲಿ ನಟಿ ಕಂಗನಾ ರಣಾವತ್ ಟಾಪ್ ಲೆಸ್ಸಾಗಿ ನಟಿಸಿದ್ದಾಳೆ ಅಷ್ಟೇ ಅಲ್ಲದೆ ಆಕೆ ಚಿತ್ರೀಕರಣ ಸಂದರ್ಭದಲ್ಲಿ ನಿಪ್ಪಲ್ ಗಾರ್ಡ್ ಸಹ ಬಳಸಿರಲಿಲ್ಲವಂತೆ.ಶಾಹೀದ್ ಕಪೂರ್ ಹಾಗೂ ಕಂಗನಾ ಮಣ್ಣಿನಲ್ಲಿ ಹೊರಳಾಡುವ ಇಂಟಿಮೇಟ್ ದೃಷ್ಯ ಇದಾಗಿದ್ದು ಈಗಾಗಲೇ ಸಿನಿವಲಯದಲ್ಲಿ ಸೆನ್ಸೇಶನ್ ಉಂಟು ಮಾಡಿದೆ.
ಕಂಗನಾಗೆ ಈ ದೃಷ್ಯದಲ್ಲಿ ನಟಿಸಲು ಪ್ರಾರಂಭದಲ್ಲಿ ಮುಜುಗರವಾಯಿತಂತೆ ಆದರೂ ಇದೊಂದು ರೊಮ್ಯಾಂಟಿಕ್ ದೃಷ್ಯದ ಭಾಗವಾಗಿರುವುದರಿಂದ ಖುಷಿಯಿದೆ ಎನ್ನುತ್ತಾಳೆ. ಕಂಗನಾ ಸ್ವಲ್ಪವೂ ಹಿಂಜರಿಯದೇ ಲೀಲಾಜಾಲವಾಗಿ ನಟಿಸುವ ಮೂಲಕ ತನ್ನ ವೃತ್ತಿಪರತೆ ಮೆರೆದಿದ್ದಾಳೆ ಎನ್ನುತ್ತಾರೆ ರಂಗೂನ್ ಚಿತ್ರ ನಿರ್ದೇಶಕ ವಿಶಾಲ್ ಭಾರಧ್ವಾಜ್.ರಂಗೂನ್ ಚಿತ್ರ ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಅರಳುವ ತ್ರಿಕೋನ ಪ್ರೇಮ ಕತೆಯಾಗಿದೆ. ಚಿತ್ರದಲ್ಲಿ ಸೈಫ್ ಆಲಿ ಖಾನ್ ಇನ್ನೊಬ್ಬ ಹೀರೋ.
loading...

No comments