Breaking News

40 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತಿದೆ `ಕೆಜಿಎಫ್’


ಮದುವೆ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಮೊದಲ ಚಿತ್ರ `ಕೆಜಿಎಫ್’. ಇದೊಂದು ಬಹು ಬಜೆಟ್ ಚಿತ್ರವಾಗಿದ್ದು ಸುಮಾರು 40 ಕೋಟಿ ರೂ ಈ ಸಿನಿಮಾ ನಿರ್ಮಾಣಕ್ಕೆ ತಗಲಲಿದ್ದು ಇದು ಸ್ಯಾಂಡಲ್ವುಡ್ಡಿನಲ್ಲಿ ಹೊಸ ದಾಖಲೆ ಎನಿಸಿಕೊಳ್ಳಲಿದೆ.

ಈ ಚಿತ್ರದಲ್ಲಿ ವಿಭಿನ್ನ ಗೆಟಪ್ಪಿನಲ್ಲಿ ಯಶ್ ಕಾಣಿಸಲಿದ್ದು ಅದಕ್ಕಾಗಿ ಸಕತ್ ತಯಾರಿ ಮಾಡುತ್ತಿದ್ದಾನಂತೆ ಯಶ್. ಸಿನಿಮಾದಿಂದ ಸಿನಿಮಾಗೆ ತನ್ನ ಲುಕ್ ಬದಲಾಯಿಸಿಕೊಳ್ಳುವ ಯಶ್ `ಕೆಜಿಎಫ್’ ಚಿತ್ರದಲ್ಲಿ ಇನ್ನೊಂದು ಡಿಫ್ರೆಂಟ್ ಲುಕ್ಕಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾನೆ. ಇದಕ್ಕಾಗಿ ಯಶ್ ಜಿಮ್ಮಿನಲ್ಲಿ ಬಾರಿ ವರ್ಕೌಟ್ ಮಾಡುತ್ತಿದ್ದು, ಬಾಡಿ ಬಿಲ್ಡ್ ಕೂಡ ಮಾಡುತ್ತಿದ್ದಾನಂತೆ. ಜೊತೆಗೇ ಹೊಸ ಹೇರ್ ಸ್ಟೈಲಿನಲ್ಲಿ ರಾಕಿಂಗ್ ಆಗಿ ಕಾಣಲಿದ್ದಾನಂತೆ ಯಶ್.

ಯಶ್ ಜೊತೆ ನಾಯಕಿಯಾಗಿ `ಮಿಸ್ ಸುಪ್ರಾ ನ್ಯಾಷನಲ್’ ಬ್ಯೂಟಿ ಕ್ವೀನ್ ಶ್ರೀನಿಧಿ ಶೆಟ್ಟಿ ರೊಮ್ಯಾನ್ಸ್ ಮಾಡಲಿದ್ದಾಳೆ. `ಕೆಜಿಎಫ್’ ಚಿತ್ರವನ್ನು `ಉಗ್ರಂ’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯ ವಹಿಸಲಿದ್ದು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ.
loading...

No comments