Breaking News

ತಿಂಗಳಿಗೆ 17 ರೂಪಾಯಿಗೆ ಮೊಬೈಲ್ ಡೇಟಾ



ನವದೆಹಲಿ :  ಗ್ರಾಹಕರಿಗೆ ಉಚಿತ ಕರೆ ಹಾಗೂ ಡೇಟಾ ಸೌಲಭ್ಯ ನೀಡಿ ಇಂಟರ್ನೆಟ್ ಜಗತ್ತಿನಲ್ಲಿ ಸದ್ದು ಮಾಡಿದ ಜಿಯೋಗೆ ಪ್ರತಿಸ್ಪರ್ಧಿಯಾಗಿ ಕೆನಡಾ ಮೂಲದ ಮೊಬೈಲ್ ಹ್ಯಾಂಡ್'ಸೆಟ್ ತಯಾರಕ ಕಂಪೆನಿ ಡೇಟಾವಿಂಡ್  ಸದ್ಯದಲ್ಲೇ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡಲಿದೆ .200 ರೂಪಾಯಿಗೆ ವರ್ಷವಿಡೀ ಇಂಟರ್ನೆಟ್ ಸೇವೆ ನೀಡುವ ಸಾಧ್ಯತೆಗಳಿವೆ. ವರ್ಷಕ್ಕೆ 200 ರೂಪಾಯಿಯಾದರೆ, ತಿಂಗಳಿಗೆ 17 ರೂಪಾಯಿಯಂತೆ ನೀವು ಇಂಟರ್ನೆಟ್ ಡೇಟಾ ಬಳಸಬಹುದಾಗಿದೆ.
ಈ ಕುರಿತಾಗಿ ಮಾತನಾಡಿರುವ ಈ ಕಂಪೆನಿಯ ಅಧ್ಯಕ್ಷ ಹಾಗೂ ಕಾರ್ಯಕಾರಿ ಅಧಿಕಾರಿ ಸುನೀತ್ ಸಿಂಹ ತುಲಿ 'ಕಂಪೆನಿಯು ತನ್ನ ಗ್ರಾಹಕರಿಗೆ ತಿಂಗಳೊಂಕ್ಕೆ 20 ರೂಪಾಯಿ ಇಲ್ಲವೇ ಅದಕ್ಕೂ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ನೀಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಂಪೆನಿ ತನ್ನ ದೂರಸಂಚಾರ ವ್ಯವಹಾರಕ್ಕಾಗಿ 100 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಹಾಗೂ ಈ ಮೊತ್ತವನ್ನು ಲೈಸೆನ್ಸ್ ಪಡೆದ ಬಳಿಕದ ಮೊದಲ 6 ತಿಂಗಳಲ್ಲಿ ಕಂಪೆನಿ ಹೂಡಿಕೆ ಮಾಡಲಿದೆ' ಎಂದು ತಿಳಿಸಿದ್ದಾರೆ.
ಕಡಿಮೆ ವೆಚ್ಚದ ಸ್ಮಾರ್ಟ್'ಫೋನ್ ಮತ್ತು ಟ್ಯಾಬ್ಲೆಟ್ ತಯಾರಿಸುವ ಈ ಕಂಪೆನಿ ದೇಶವಿಡೀ ವರ್ಚುವಲ್ ನೆಟ್'ವರ್ಕ್ ಸೇವೆಗಳನ್ನು ನೀಡಲು ಪರವಾನಿಗೆ ನೀಡುವಂತೆ ಮನವಿ ಮಾಡಿಕೊಂಡಿದೆ. ಈ ಪರವಾನಿಗೆ ಪಡೆದ ಬಳಿಕವಷ್ಟೇ ಕಂಪೆನಿ ಡೇಟಾ ಸೌಲಭ್ಯ ಹಾಗೂ ಮೊಬೈಲ್ ಟೆಲಿಫೋನ್ ಸೇವೆಗಳನ್ನು ನೀಡಲು ಅರ್ಹವಾಗಿರುತ್ತದೆ. ಆದರೆ ಸದ್ಯ ಸೇವೆ ಸಲ್ಲಿಸುವತ್ತಿರುವ ಟೆಲಿಕಾಂ ಕಂಪೆನಿಯ ಒಪ್ಪಂದ ಮಾಡಿಕೊಂಡ ಬಳಿಕವಷ್ಟೇ ಇಂತಹುದ್ದೊಂದು ಆಫರ್ ನೀಡಲು ಕಂಪೆನಿಗೆ ಸಾಧ್ಯವಾಗುತ್ತದೆಯಂತೆ.

loading...

No comments