Breaking News

ಅಮೇರಿಕಾ ಭಾರತೀಯರ ಮೇಲೆ ನಿಲ್ಲದ ದಾಳಿ


ವಾಷಿಂಗ್ಟನ್ : ಅಮೇರಿಕಾದಲ್ಲಿ ಎರಡು ವಾರಗಳ ಅಂತರದಲ್ಲಿ ಭಾರತೀಯರ ಮೇಲೆ ಮೂರನೇ ಧಾಳಿ ನಡೆದಿದೆ. ಅಮೇರಿಕಾದ 'ಕೆಂಟ್'ನಲ್ಲಿ ಭಾರತೀಯ ಮೂಲದ 39ವರ್ಷ ವಯಸ್ಸಿನ ಸಿಖ್ ವ್ಯಕ್ತಿಯ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ಧಾಳಿ ನಡೆಸಿದ್ದು, ಮುಸುಕುದಾರಿಯಾಗಿದ್ದ ವ್ಯಕ್ತಿ ಗುಂಡಿನ ದಾಳಿ ನಡೆಸುವ ಮುನ್ನ "ಅಮೇರಿಕಾ ಬಿಟ್ಟು ತೊಲಗಿ, ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ವಾಪಾಸ್ ಹೋಗಿ" ಎಂದು ಹೇಳಿದ್ದಾನೆ.

ಅಮೇರಿಕಾದಲ್ಲಿ ಜನಾಂಗೀಯ ದ್ವೇಷಕ್ಕೆ ಈಗಾಗಲೇ ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಲಾಗಿತ್ತು, ಈ ಘಟನೆ ನಡೆದ 10ದಿನಗಳ ಅಂತರದಲ್ಲಿ ಭಾರತೀಯ ಮೂಲದ ವ್ಯಾಪಾರಿ ಹರ್ನೀಶ್ ಪಟೇಲ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಗುಂಡಿನ ದಾಳಿಯಿಂದ ಗಾಯಗೊಂಡಿರುವ ಸಿಖ್ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅಮೆರಿಕಾದ ಎಫ್.ಬಿ.ಐ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
loading...

No comments