Breaking News

ಉಡುಪಿಯ ಅಲೆವೂರು ಗ್ರಾಮ ಪಂಚಾಯತ್ ದೊಂಬರಾಟ



ಕೊರಗರ ಮನೆಯಲ್ಲಿ ಸಹಭೋಜನ
ಅಡುಗೆ ಭಟ್ಟರ ಮನೆಯಲ್ಲಿ ಊಟ ತಯಾರಿಸಿ ಕೊರಗರ ಮನೆಯಲ್ಲಿ ಊಟ

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ಈ ಬಾರಿ ಹೊಸ ವರ್ಷ ದಿನ ಕೊರಗ ಜನಾಂಗದವರ ಮನೆಯಲ್ಲಿ  ಆಹಾರ ಸೇವಿಸಿ ಸಹಭೋಜನ ಮಾಡುವ  ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು . ಜನಪ್ರತಿನಿಧಿಗಳು ಮತ್ತು  ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ನೀಡಿದ ತಪ್ಪು ಮಾಹಿತಿ ಇಂದ  ಹೊರಗಿನಿಂದ ತರಿಸಿಕೊಂಡ ಊಟ ತಿಂದು ತೇಗಿಕಾಟಾಚಾರದ ಸಹಭೋಜನ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಈಬಗ್ಗೆ  ನನಗೆ ಗೊತ್ತೆ ಇಲ್ಲ ಎಂದಿದ್ದಾರೆ.
ಅಡುಗೆ ಭಟ್ಟರ ಮನೆಯಲ್ಲಿ ಊಟ ತಯಾರಿಸಿ ಕೊರಗರ ಮನೆಯಲ್ಲಿ ಬಡಿಸಲಾಗಿದೆಯಂತೆ. ಯಾವ ಕೊರಗರೂ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಜೊತೆ ಊಟಕ್ಕೆ ಕೂರಲಿಲ್ಲ. ಬಂದವರು ಅವರ ಪಾಡಿಗೆ ಉಂಡು ಹೋಗಿದ್ದಾರೆ. ಅಷ್ಟೆ ಅಲ್ಲದೆ ಕಾರ್ಯಕ್ರಮಕ್ಕೆ ಪಂಚಾಯತ್ ನಡೆ ಕೊರಗ ಸಮುದಾಯದ ಎಡೆಗೆ ಎಂಬ ಹೆಸರು ನೀಡಲಾಗಿತ್ತು. ಆದ್ರೆ ಇದು ಕೇವಲ ಕಾಟಾಚಾರದ ಶೀರ್ಷಿಕೆಯಾಗಿ ಉಳಿದಿದೆ.
ಇಂದಿಗೂ ಕರಾವಳಿಯ ಕೊರಗರು ಅತ್ಯಂತ ಹಿಂದುಳಿದಿದ್ದಾರೆ. ತಮಗಾಗಿ ಬರುವ ಅನುದಾನವನ್ನು ಬಳಸಿಕೊಳ್ಳುವ ಅರಿವೂ ಇಲ್ಲದ ಮುಗ್ದ ಜನರು.  ಜನರ ಮುಗ್ಧತೆಯನ್ನ ಜನಪ್ರತಿನಿಧಿಗಳು, ಅಧಿಕಾರಿಗಳು, ಈ ರೀತಿ ಬಳಸಿಕೊಳ್ತಾರೆ ಅಂದ್ರೆ ನಿಜಕ್ಕೂ ನಾಚಿಕೇಗೇಡು.
-suvarana news
loading...

No comments