ಮುಂಬೈ :ಕಪ್ಪು ಹಣದ ವಿರುದ್ಧ ರಣಕಹಳೆ ಊದಿ ಸಾವಿರ ಮತ್ತು ಐನೂರು ರೂಪಾಯಿ ನೋಟ್ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಂಬೈ ಡಬ್ಬಾವಾಲ ದವರು ಒಕ್ಕೊರಲಿನಿಂದ ಬೆಂಬಲಿಸಿದ್ದಾರೆ. ಮೋದಿ ಅವರ ಡಿಜಿಟಲ್ ಇಂಡಿಯಾಗೆ ಬೆಂಬಲ ಘೋಷಿಸಿ ತಮ್ಮ ಗ್ರಾಹಕರನ್ನು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಮೂಲಕ ಡಬ್ಬಾವಾಲ ವೆಬ್ಸೈಟ್ ಗೆ ನೋಂದಾವಣೆ ಮಾಡುವುದಾಗಿ ತಿಳಿಸಿದ್ದಾರೆ, ಡಿಜಿಟಲ್ ಇಂಡಿಯಾ ಬೆಂಬಲಿಸುವುದರ ಮೂಲಕ ಸಮಯ ಮತ್ತು ಚಿಲ್ಲರೆ ಸಮಸ್ಯೆ ಇಂದ ಮುಕ್ತ ಗೊಳ್ಳಲಿದೆ ಡಬ್ಬಾವಾಲ ಸಂಘದವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ
No comments