Breaking News

ಐಸಿಸ್ ಉಗ್ರ ಸಂಘಟನೆ ಸೇರಿದ್ದ ಕಲ್ಯಾಣ್ ನ ಯುವಕ ಸಿರಿಯಾದಲ್ಲಿ ಸಾವು.

ಮಹಾರಾಷ್ಟ್ರ : ಥಾಣೆಯ ಕಲ್ಯಾಣ್ ನಿಂದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆ ಸೇರಿದ್ದ 22 ವರ್ಷದ ಯುವಕ ಸಿರಿಯಾದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.2014 ರಲ್ಲಿ ಮನೆ ತೊರೆದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಐಸಿಸ್ ಸೇರಿದ್ದ 22 ವರ್ಷದ 'ಅಮನ್ ನಯೀಮ್ ಟಂಡೆಲ್' ಸಾವನ್ನಪ್ಪಿದ ಉಗ್ರ.
ಕಲ್ಯಾಣ್ ನ 'ಅಮನ್ ನಯೀಮ್ ಟಂಡೆಲ್' ಹಾಗೂ ಇತರ ಮೂವರು 2014 ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಾಗಿ ಹೋರಾಡಲು ಸಿರಿಯಾ ತೆರಳಿದ್ದರು. ಇದರಲ್ಲಿ ಓರ್ವ ಭಾರತಕ್ಕೆ ಮರಳಿದ್ದರೆ ಮತ್ತೋರ್ವ 2015 ಜನವರಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ. ಈಗ ಮೃತಪಟ್ಟ ಉಗ್ರ ಅಮನ್ ನ ತಂದೆ 'ನಯೀಮ್ ಟಂಡೆಲ್' ಕಲ್ಯಾಣ್ ನ ಗೋವಿಂದ್ವಾಡಿ ಬಳಿ ವಾಸವಿದ್ದು, ಶನಿವಾರ ರಾತ್ರಿ ಗುರುತಿಲ್ಲದ ವ್ಯಕ್ತಿ ಪೋನ್  ಮುಖಾಂತರ ಕರೆ ಮಾಡಿದ ಅಮನ್ ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾನೆ.
ಈ ವರ್ಷದ ಪ್ರಾರಂಭದಲ್ಲಿ ಐಸಿಸ್ ಉಗ್ರರು ಬಿಡುಗಡೆ ಮಾಡಿದ ವೀಡಿಯೋದಲ್ಲಿ 'ಅಮನ್' ಹಾಗೂ ಇನ್ನೊಬ್ಬ ಉಗ್ರ ಫಹದ್ ಶೇಕ್ ಕಾಶ್ಮೀರ, ಗುಜರಾತ್ ಹಾಗೂ ಮುಜಫರ್ ನಗರದಲ್ಲಿ ಮುಸಲ್ಮಾನರನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸುವುದಾಗಿ ಬೆದರಿಕೆ ಹಾಕಿದ್ದರು.
ಅಮನ್ ಕಳೆದ ವರ್ಷ ಕೊನೆಯವರೆಗೂ ಮನೆಯವರೊಂದಿಗೆ ಪೋನ್ ಮುಖಾಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.

No comments