ಜಯ ಪ್ರಕಾಶ್ ಹೆಗ್ಡೆ ,ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಹರಿ ಕೃಷ್ಣ ಬಂಟ್ವಾಳ್ ಬಿಜೆಪಿಗೆ ?
ಮುಂಬರುವ ವಿಧಾನ ಸಭಾ ಚುನಾವಣೆಗೆ ಇನ್ನೇನು ಒಂದುವರೆ ವರ್ಷ ಇರುವಾಗಲೇ ಪಕ್ಷೇತರ ಮತ್ತು ಕಾಂಗ್ರೆಸ್ ನಿಂದ ಬಂಡಾಯವೆದ್ದ ಅಭ್ಯರ್ಥಿಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡ್ಡಿಯೂರಪ್ಪನವರು ರೂಪಿಸುತ್ತಿದ್ದಾರೆ ,
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಯನ್ನು ಸದುಪಯೋಗ ಪಡಿಸಿಕೊಳ್ಳಲು ಜಯಪ್ರಕಾಶ್ ಹೆಗ್ಡೆ ,ಹಾಲಾಡಿ ಶ್ರೀನಿವಾಶ್ ಶೆಟ್ಟಿ ಮತ್ತು ಹರಿ ಕೃಷ್ಣ ಬಂಟ್ವಾಳ್ ಹಾತೊರೆಯುತ್ತಿದ್ದಾರೆ ಕಳೆದ mlc ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಂಡಾಯ ಬಾವುಟ ಹಾರಿಸಿದ್ದ ಜಯಪ್ರಕಾಶ್ ಹೆಗ್ಡೆ ,ಹರಿ ಕೃಷ್ಣ ಬಂಟ್ವಾಳ್ ತಮ್ಮ ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸೇರ ಬಯಸುತ್ತಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
ಜನತಾ ಪರಿವಾರದಲ್ಲಿ ಬಹಳ ವರ್ಷ ಸಕ್ರಿಯರಾಗಿದ್ದ ಜಯಪ್ರಕಾಶ್ ಹೆಗ್ಡೆ, ಜನತಾದಳ ಸರ್ಕಾರದಲ್ಲಿ ಬಂದರು ಮತ್ತು ಮೀನುಗಾರಿಕೆ ಸಚಿವರಾಗಿದ್ದರು. ಜನತಾದಳ ವಿಭಜನೆಯಾದಾಗ ಜೆಡಿಯು ಜತೆ ಗುರುತಿಸಿಕೊಂಡಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದರು.
ಡಿ.ವಿ. ಸದಾನಂದಗೌಡರು ಚಿಕ್ಕಮಗಳೂರು–ಉಡುಪಿ ಲೋಕಸಭೆ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಸಡ್ಡು ಹೊಡೆದಿದ್ದರು, 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್‌ನಿಂದ ಸ್ಫರ್ಧಿಸಿ ಸೋತರು. ಕಾಂಗ್ರೆಸ್ ಪಕ್ಷ ಸರಿಯಾಗಿ ತನ್ನನ್ನು ಗುರುತಿಸುತ್ತಿಲ್ಲ ಎಂಬ ಅಸಮಾಧಾನ ಹೆಗ್ಡೆ ಅವರಿಗೆ ಇತ್ತು.ಕಳೆದ mlc ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಂಡಾಯ ಭಾವುಟ ಹಾರಿಸಿದ್ದರು ,ಬಂಟ ಸಮುದಾಯದ ಅತ್ಯಂತ ಪ್ರಬಲ ಅಭ್ಯರ್ಥಿ ಎಂದು ಗುರುತಿಸಿಕೊಂಡ ಇವರು ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಟಿಕೆಟ್ ಕೊಡುವ ಭರವಸೆ ನೀಡಿದರೆ ಮತ್ತು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಿದರೆ ಬಿಜೆಪಿ ಸೇರಲು ಒಲವು ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ
ಬಿಜೆಪಿಯಲ್ಲಿ ಬಹಳ ವರ್ಷ ಗುರುತಿಸಿಕೊಂಡಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಆ ಪಕ್ಷದಿಂದ ಶಾಸಕರಾಗಿದ್ದರು. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಬರುವಂತೆ ಸಂದೇಶ ರವಾನೆಯಾಗಿತ್ತು. ಕೊನೆ ಗಳಿಗೆಯಲ್ಲಿ ತಮ್ಮ ಬದಲು ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿದ್ದರಿಂದಾಗಿ ಹಾಲಾಡಿ ಬೇಸರಗೊಂಡಿದ್ದರು. ಬಿಜೆಪಿ ತೊರೆದ ಅವರು 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ದಾನ ಶೂರ ಕರ್ಣನೆಂದು ಖ್ಯಾತಿಗಳಿಸಿದ ಇವರು ತಮ್ಮ ಕ್ಷೇತ್ರದಲ್ಲಿ ಜನರ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ, ಹಲವಾರು ಬಾರಿ ಪಕ್ಷೇತರರಾಗಿ ಇದ್ದು ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಇವರು ಕೂಡ ಬಿಜೆಪಿ ಸೇರಲು ಹಲವು ಬೇಡಿಕೆಗಳನ್ನು ರಾಜ್ಯ ಬಿಜೆಪಿ ಮುಖಂಡರ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ
ಹರಿ ಕೃಷ್ಣ ಬಂಟ್ವಾಳ್ ಇವರು ಸತತ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು, ಕಾಂಗೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಬಲಗೈ ಆಗಿದ್ದರು, ಕಳೆದ mlc ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ನಿರಾಕರಿಸಿದ ಕಾರಣ ಕಾಂಗ್ರೆಸ್ ನಿಂದ ಬಂಡಾಯವೆದ್ದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಬಿಲ್ಲವ ಸಮುದಾಯದ ಪ್ರಮುಖನೆಂದು ಹೇಳಿಕೊಳ್ಳುವ ಇವರು ಬಿಜೆಪಿ ಸೇರುವುದಾದರೆ mlc ನೀಡಬೇಕೆಂದು ಬೇಡಿಕೆಯನ್ನು ಬಿಜೆಪಿ ರಾಜ್ಯ ನಾಯಕರ ಮುಂದಿಟ್ಟು ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ
ಕನ್ನಡದ ಕಗ್ಗೊಲೆ ಮಾಡಬೇಡಿ.
ReplyDeleteಕನ್ನಡದ ಕಗ್ಗೊಲೆ ಮಾಡಬೇಡಿ.
ReplyDelete