Breaking News

ಇಬ್ರಾಹಿಂ ಕುಟುಂಬದ ವಿರುದ್ಧ ಭ್ರೂಣಹತ್ಯೆ ಆರೋಪ ?


ಬೆಂಗಳೂರು: ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿಎಂ ಇಬ್ರಾಹಿಂ ವಿರುದ್ಧ ಭ್ರೂಣ ಹತ್ಯೆಯ ಗಂಭೀರ ಆರೋಪ ಕೇಳಿಬಂದಿದೆ.
ಹಣ್ಣಿನ ಜ್ಯೂಸಿನಲ್ಲಿ ಗರ್ಭಪಾತದ ಮಾತ್ರೆ ಹಾಕಿ ಸೊಸೆಯ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹತ್ಯೆ ಮಾಡಿದ್ದಾರೆ ಎಂದು ಇಬ್ರಾಹಿಂ ಸಹೋದರ ಸಿ.ಎಂ. ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ಇಬ್ರಾಹಿಂ ಪುತ್ರಿ ಇಫಾ ಇಫಾಗೆ ಖಾದರ್ ಪುತ್ರ ಫೈಸಲ್ ಜತೆ 7 ತಿಂಗಳ ಹಿಂದಷ್ಟೆ ಮದುವೆಯಾಗಿತ್ತು. ಮನೆಯವರಿಗೆ ತಿಳಿಸದೇ ಮದುವೆ ಮಾಡಿಕೊಂಡ ನಂತರ ರಿಜಿಸ್ಟರ್ ಮಾಡಿಸಲಾಗಿತ್ತು. ಮಗಳು ಗರ್ಭಿಣಿಯಾದ ಸುದ್ದಿ ಕೇಳಿ ಡಿಸೆಂಬರ್​ನಲ್ಲಿ ಮನೆಗೆ ಕರೆಸಿಕೊಂಡಿದ್ದ ಇಫಾ ತಾಯಿ ಲೈಲಾ, ಜ್ಯೂಸ್​ನಲ್ಲಿ ಔಷಧ ನೀಡಿ ಗರ್ಭಪಾತ ಮಾಡಿದ್ದಾರೆ ಎಂದು ಖಾದರ್ ಆರೋಪಿಸಿದ್ದಾರೆ. ರಕ್ತಸ್ರಾವದಿಂದ ಬಳಲುತ್ತಿದ್ದ ಇಫಾ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮೂಲಕ ಗರ್ಭಪಾತ ನಡೆಸಲಾಗಿದೆ. ಇಫಾ ಆರೋಗ್ಯ ಸ್ಥಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರ ತಾಯಿ ಬಲವಂತವಾಗಿ ಮೂಸಂಬಿ ಜ್ಯೂಸ್ ಕೊಟ್ಟರು. ಮಧ್ಯಾಹ್ನದ ಸಮಯಕ್ಕೆ ಹೊಟ್ಟೆನೋವು ಹೆಚ್ಚಾಗಿ ಸಂಜೆ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸಮಸ್ಯೆ ಇದೆ ಎಂಬ ನೆಪ ನೀಡಿ ತಮ್ಮ ಅಥವಾ ಮಾವ ಖಾದರ್ ಅನುಮತಿ ಪಡೆಯದೆ ಗರ್ಭಪಾತ

ಮಾಡಿಸಿದ್ದಾರೆ ಎಂದು ಪತಿ ಫೈಸಲ್ ಆರೋಪಿಸಿದ್ದಾರೆ. ಆಕ್ರೋಶಗೊಂಡು ಮಧ್ಯರಾತ್ರಿ ಆಸ್ಪತ್ರೆಗೆ ಆಗಮಿಸಿದ್ದ ಫೈಸಲ್, ಆಸ್ಪತ್ರೆಯ ಗಾಜುಗಳನ್ನು ಒಡೆದು ಹಾಕಿದ್ದರು. ಈ ಸಂಬಂಧ ವಿಕ್ರಮ್ ಆಸ್ಪತ್ರೆ ಆಡಳಿತ ಮಂಡಳಿ ಫೈಸಲ್ ವಿರುದ್ಧ ಕಬ್ಬನ್​ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇದೇ ವೇಳೆ ಇಬ್ರಾಹಿಂ ಕುಟುಂಬ ಸದಸ್ಯರು ಹಾಗೂ ಆಸ್ಪತ್ರೆ ಇಬ್ಬರು ವೈದ್ಯರ ವಿರುದ್ಧ ಖಾದರ್ ಪ್ರತಿದೂರು ದಾಖಲಿಸಿದ್ದಾರೆ.

No comments