Breaking News

ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ?


ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ? ಸರಿಯಾಗಿ ಪೋಷಣೆ ಮಾಡದಿದ್ದರೆ ನಿಮ್ಮ ಕಾಲುಗಳೇ ನಿಮಗೆ ಶತ್ರುವಾಗಬಹುದು. ಅದರಲ್ಲೂ ಮಳೆಗಾಲದಲ್ಲಿ ಹಿಮ್ಮಡಿ ಒಡೆಯುವುದನ್ನು ನಿರ್ಲಕ್ಷಿಸಿದರೆ ಸಹಿಸಲಾರದ ನೋವು. ಒಡೆದ ಹಿಮ್ಮಡಿಯನ್ನು ಮೃದುಗೊಳಿಸುವುದು ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ. ಒಡೆದ ಹಿಮ್ಮಡಿಗೆ ಸಲಹೆಗಳು: 1. ಪ್ಯೂಮಿಕ್ ಸ್ಟೋನ್: ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ ಪ್ಯೂಮಿಕ್ ಸ್ಟೋನ್ ನಿಂದ ಒಣಗಿದ ನಿಮ್ಮ ಹಿಮ್ಮಡಿಗಳನ್ನು ಸ್ನಾನ ಮಾಡುವಾಗ ಸ್ಕ್ರಬ್ ನಂತೆ ಮೃದುವಾಗಿ ಉಜ್ಜಿಕೊಂಡರೆ ನಿರ್ಜೀವ ಕಣಗಳು ತೊಲಗಿ ಪಾದಗಳು ನುಣುಪಾಗುತ್ತದೆ.
2. ಮಾಯಿಶ್ಚರೈಸರ್: ಚರ್ಮ ಒಣಗಲು ಬಿಡದೆ ಪಾದಕ್ಕೆ ಮಾಯಿಶ್ಚರೈಸರನ್ನು ಹಚ್ಚುತ್ತಿದ್ದರೆ ಚರ್ಮ ಮೃದುಗೊಳ್ಳುತ್ತದೆ. ಸಾಕ್ಸ್ ಹಾಕಿಕೊಳ್ಳುವ ಮುನ್ನ ಬಾಡಿ ಲೋಶನ್ ಅಥವಾ ಮಾಯಿಶ್ಚರೈಸರ್ ಲೇಪಿಸಿಕೊಂಡರೆ ಪಾದ ಕೋಮಲವಾಗಿರುತ್ತದೆ. ರಾತ್ರಿ ಹೊತ್ತು ಲೇಪಿಸಿಕೊಂಡು ಮಲಗಿದರೆ ಉತ್ತಮ.
3. ಉಪ್ಪು ನೀರು: ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಮತ್ತು ನಿಂಬೆ ರಸ ಬೆರೆಸಿ 20 ನಿಮಿಷ ಪಾದವನ್ನು ಅದರಲ್ಲಿ ಇಡಬೇಕು. ಉಪ್ಪು ಪಾದವನ್ನು ಮೃದುಗೊಳಿಸಿದರೆ, ನಿಂಬೆ ಕೊಳೆಯನ್ನು ತೊಲಗಿಸುತ್ತದೆ. ಪ್ಯೂಮಿಕ್ ಸ್ಟೋನ್ ನಿಂದ ಮೃದುವಾಗಿ ಉಜ್ಜಿದರೆ ಸ್ವಚ್ಛ ಪಾದ ನಿಮ್ಮದಾಗುತ್ತೆ.
 4. ರೊಸ್ ವಾಟರ್: ಗ್ಲಿಸರಿನ್ ಜೊತೆ ರೋಸ್ ವಾಟರ್ ಸೇರಿಸಿ ಅದನ್ನು ಹತ್ತಿಯಿಂದ ಹಚ್ಚಿಕೊಳ್ಳಬೇಕು. ಸುಮಾರು 15 ದಿನ ಈ ನಿಯಮ ಪಾಲಿಸಿದರೆ ಒಡೆದ ಹಿಮ್ಮಡಿ ಬೇಗ ಗುಣಹೊಂದುತ್ತದೆ.
5. ಶೂ ಧರಿಸಿ: ನಿಮ್ಮ ಪಾದಗಳಲ್ಲಿ ತೇವಾಂಶವಿರುವಂತೆ ನೋಡಿಕೊಂಡು ಹಿಮ್ಮಡಿ ಒಡೆಯದಂತಿರಲು ಶೂ ಧರಿಸಿದರೆ ತುಂಬಾ ಉಪಯುಕ್ತ.
6. ನೀರು ಕುಡಿಯಿರಿ: ತುಂಬಾ ಚೆನ್ನಾಗಿ ನೀರು ಕುಡಿದರೆ ದೇಹದೊಂದಿಗೆ ಪಾದವನ್ನೂ ತಣ್ಣಗಿಡುತ್ತದೆ. ಇದು ಹಿಮ್ಮಡಿ ಒಡೆಯದಂತೆ ಒಳಗಿನಿಂದ ರಕ್ಷಣೆ ನೀಡುತ್ತದೆ.
7. ಬಾಳೆಯೊಂದಿಗೆ ಗ್ಲಿಸರಿನ್: ಚೆನ್ನಾಗಿ ಕಳಿತ ಬಾಳೆ ಹಣ್ಣಿಗೆ ಕೆಲವು ಹನಿ ಗ್ಲಿಸರಿನ್ ಬೆರೆಸಿ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಂಡರೆ ಪಾದ ನುಣುಪಾಗಿ ಮಿರುಗುತ್ತದೆ.

-via ಸತ್ಯ ಹನಸೋಗೆ 

loading...

No comments