Breaking News

ರಾಯಣ್ಣ ಬ್ರಿಗೇಡ್ ಹೆಸರಲ್ಲಿ ನಕಲಿ ಕರಪತ್ರ : ಈಶ್ವರಪ್ಪ


ಶಿವಮೊಗ್ಗ : ಅರಸೀಕೆರೆ ತಾಲೂಕಿನಲ್ಲಿ  ಈಶ್ವರಪ್ಪನವರು ಮುಂದಿನ ಮುಖ್ಯಮಂತ್ರಿ ಎಂದು ಮುದ್ರಿಸಿ ಹಂಚಲಾದ ಕರಪತ್ರದ ಬಗ್ಗೆ ವಿಧಾನ ಸಭಾ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಸ್ಪಷ್ಟಿಕರಣ ನೀಡಿದ್ದಾರೆ .ಈ ಕರಪತ್ರದ ಹಿಂದೆ ವ್ಯಕ್ತಿಯೊಬ್ಬರ ಕೈವಾಡ ಇದೆ ಎಂದು ಆರೋಪಿಸಿದರು ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿರೋಪ್ಪನವರನ್ನು ತೃಪ್ತಿ ಪಡಿಸಲು ಮತ್ತು ಮುಂದಿನ ವಿಧಾನ ಸಭಾ ಟಿಕೆಟ್ ಪಡೆಯಲು ಈ ರೀತಿ ಕರ ಪತ್ರ ಹಂಚಲಾಗಿದೆ ,ಕರಪತ್ರ ಹಂಚಿರುವ ವ್ಯಕ್ತಿಗಳ ಚಹರೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಅವರಲ್ಲಿ ರವಿ ನಾಯ್ಕ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಮತ್ತು ಇಂತ ದುಷ್ ಕೃತ್ಯದಿಂದ ರಾಯಣ್ಣ ಬ್ರಿಗೇಡ್ಗೆ ಮಸಿ ಬಳಿಯಲು ಸಾಧ್ಯವಿಲ್ಲ ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಿಕರಿಸಿದರು.

No comments