ಮನೆಯನ್ನೇ ಕಸಾಯಿಖಾನೆ ಮಾಡಿಕೊಂಡ ಖದೀಮರ ಬಂಧನ
ಧರ್ಮಸ್ಥಳ : ಮನೆಯಲ್ಲೇ ಅಕ್ರಮ ಕಸಾಯಿ ಖಾನೆ ಮಾಡಿ ರಾಜರೋಷವಾಗಿ ಮಾಂಸ ದಂದೆಯನ್ನು ನಡೆಸುತ್ತಿದ್ದ ತಂಡವನ್ನು ಧರ್ಮಸ್ಥಳ ಪೊಲೀಸರು ಬಂಧಿಸಿರುವ ಘಟನೆ ವರದಿ ಆಗಿದೆ .
ಬಂಧಿತ ಆರೋಪಿಗಳನ್ನು ವಿಶ್ವನಾಥ, ಕಿಟ್ಟು ಮುಗೇರ, ಜೋಸೆಫ್, ಮತ್ತು ಜೋನ್ ಕೆ.ವಿ. ಎಂದು ಗುರುತಿಸಲಾಗಿದೆ .ಆರೋಪಿಗಳು ಆಟೋ ರಿಕ್ಷಾದ ಮೂಲಕ ದನದ ಮಾಂಸವನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ಹಿಂದೂ ಸಂಘಟನೆಯವರು ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಧರ್ಮಸ್ಥಳ ಪೊಲೀಸರು ಪೊಲೀಸರು ಕಾರ್ಯಾಚರಿಸಿ ಈ ನಾಲ್ಕು ಜನರನ್ನು ಬಂಧಿಸಿದ್ದಾರೆ ,ಬಂಧಿತ ಆರೋಪಿಗಳಿಂದ ಆಟೋ ರಿಕ್ಷಾ ,ಮಚ್ಚುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ .
No comments