Breaking News

ಅಧಿಕಾರ ತ್ಯಜಿಸುವ ಕೆಲವೇ ಕೆಲವು ಗಂಟೆಗಳ ಮೊದಲು ಪ್ರಧಾನಿ ಮೋದಿಗೆ ಕೊನೆಯ ಕರೆ ಮಾಡಿದ ಒಬಾಮವಾಷಿಂಗ್ಟನ್ : ಅಮೆರಿಕಾದ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮ ತಾವು ಅಧಿಕಾರ ತ್ಯಜಿಸುವ ಕೆಲವೇ ಕೆಲವು ಗಂಟೆಗಳ ಮೊದಲು ಅಧ್ಯಕ್ಷರಾಗಿ ತಮ್ಮ ಕೊನೆಯ ದೂರವಾಣಿ ಕರೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಗೆ  ಮಾಡಿ, ಭಾರತ-ಅಮೆರಿಕಾ ಸಂಬಂಧಗಳ ಬಲವರ್ಧನೆಗೆ ಅವರು ಕೈಗೊಂಡ ಕ್ರಮಗಳಿಗಾಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕೂಡ ಈ ನಿಟ್ಟಿನಲ್ಲಿ ಒಬಾಮ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಒಬಾಮ ಅವರು 2015ರಲ್ಲಿ ಭಾರತದ ಗಣತಂತ್ರ ದಿವಸ ಕಾರ್ಯಕ್ರಮದಲ್ಲಿ ತಾವು ಮುಖ್ಯ ಅತಿಥಿಯಾಗಿ  ಭಾಗವಹಿಸಿದ್ದನ್ನು ನೆನಪಿಸಿಕೊಂಡರಲ್ಲದೆ ಕೆಲವೇ ದಿನಗಳಲ್ಲಿ 68ನೇ ಗಣತಂತ್ರ ದಿನವನ್ನು ಆಚರಿಸಲಿರುವ  ಭಾರತದ ಜನತೆಗೆ ಶುಭ ಕೋರಿದ್ದಾರೆ.

loading...

No comments