Breaking News

ಪ್ರವೀಣ್ ಖಾಂಡ್ಯಾ ಸಿಐಡಿ ವಶಕ್ಕೆ


ಚಿಕ್ಕಮಗಳೂರು :  ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮತ್ತು ತೇಜಸ್‍ಗೌಡ ಅಪಹರಣ ಪ್ರಕರಣಗಳ ಸಂಬಂಧ  ಆರೋಪಿ ಪ್ರವೀಣ್ ಖಾಂಡ್ಯಾನನ್ನು ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯ ಜ.15ರವರೆಗೆ ಸಿಐಡಿ ವಶಕ್ಕೆ ಒಪ್ಪಿಸಿದೆ. ಈ ಮೊದಲು ಖಾಂಡ್ಯಾಗೆ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ 2011ರ ದತ್ತ ಜಯಂತಿ ಸಂದರ್ಭ ನಗರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣ ವಿಚಾರಣೆಗೆ ಖಾಂಡ್ಯಾ ಹಾಜರಾಗಿರಲಿಲ್ಲ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ 2016ರ ಡಿ.31ರಂದು ನ್ಯಾಯಾಧೀಶರ ಭೇಟಿಗೆ ಬಂದಿದ್ದ ಖಾಂಡ್ಯಾನನ್ನು ಪೊಲೀಸರ ವಶಕ್ಕೆ ಪಡೆದಿದ್ದರು.

via ee sanje

No comments