ಅರ್ನಬ್ ಆರಂಭಿಸಲಿರುವ ರಿಪಬ್ಲಿಕ್ ಚಾನೆಲ್ ಹೆಸರಿನ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಕೆಂಗಣ್ಣು
ನವದೆಹಲಿ : ಟೈಮ್ಸ್ ನೌ ಸುದ್ದಿವಾಹಿನಿ ಮೂಲಕ ಸದ್ದು ಮಾಡಿದ ಅರ್ಣಬ್ ಗೋಸ್ವಾಮಿ ಆರಂಭಿಸಲುದ್ದೇಶಿರುವ ಹೊಸ ನ್ಯೂಸ್ ಚಾನೆಲ್ (ರಿಪಬ್ಲಿಕ್) ಹುಟ್ಟುವ ಮುಂಚೆಯೇ ವಿವಾದ ಸುಳಿಯಲ್ಲಿ ಸಿಕ್ಕಿಕೊಂಡಿದೆ.
ಅರ್ನಬ್ ಆರಂಭಿಸಲಿರುವ ರಿಪಬ್ಲಿಕ್ ಚಾನೆಲ್ ಹೆಸರಿನ ಬಗ್ಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಗಾದೆ ಎತ್ತಿದ್ದಾರೆ.
ಲಾಂಛನ ಮತ್ತು ಹೆಸರು (ದುರ್ಬಳಕೆ ತಡೆ) ಕಾಯ್ದೆ-1950 ರ ಪ್ರಕಾರ ರಿಪಬ್ಲಿಕ್ ಪದದ ಬಳಕೆಗೆ ಇತಿಮತಿಗಳಿವೆ. ರಿಪಬ್ಲಿಕ್ ಅಂತಹ ಹೆಸರುಗಳನ್ನು ವ್ಯಾಪಾರದ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ, ಎಂದು ಸ್ವಾಮಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ರಿಪಬ್ಲಿಕ್ ಹೆಸರನ್ನು ಇಟ್ಟುಕೊಂಡು ವ್ಯಾಪಾರ ನಡೆಸುವುದು ಕಾನೂನಿಗೆ ವಿರುದ್ಧವಾಗಿರುವುದರಿಂದ ಹೆಸರಿಗೆ ಪರವಾನಿಗೆ ನೀಡಬಾರದೆಂದು ಆಗ್ರಹಿಸಿದ್ದಾರೆ.
-suvarnanews
loading...
No comments