ಮಹಾಮಸ್ತಕಾಭಿಷೇಕ 2018 ಕ್ಕೆ ಬೆಂಗಳೂರಿನಿಂದ ಹಾಸನದವರೆಗೆ ನೇರ ರೈಲು ಸಂಚಾರ.
ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕ 2018 ಕ್ಕೆ ಬೆಂಗಳೂರಿನಿಂದ ಹಾಸನದವರೆಗೆ ನೇರ ರೈಲು ಸಂಚಾರ.
ಬೆಂಗಳೂರು ಹಾಸನ ರೈಲು 160 ಕಿ.ಮೀ ಉದ್ದದ ಕಾಮಗಾರಿ ಶೇಕಡಾ 97 ರಷ್ಟು ಮುಗಿದಿದ್ದು. ಇನ್ನೇನು ಕೆಲವೇ ದಿನದಲ್ಲಿ ಕೇಂದ್ರ ರೈಲ್ವೆ ಸುರಕ್ಷಣಾ ತಂಡದ ಅಂತಿಮ ಆದೇಶದ ನಂತರ ಸಂಚಾರಕ್ಕೆ ಮುಕ್ತವಾಗಲಿದೆ.
ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ದಿನಾಲೂ ಸುಮಾರು ನೂರಾರು ಜನ ಬರುತ್ತಾರೆ. ಇನ್ನು ಮಸ್ತಕಾಭಿಷೇಕದ ಸಮಯದಲ್ಲಿ ಸಾವಿರಾರು ಜನ ಬರುತ್ತಾರೆ. 2018 ರ ಫೆಬ್ರುವರಿಯಲ್ಲಿ ನಡೆಯಲಿರುವ ಮಸ್ತಕಾಭಿಷೇಕಕ್ಕೆ ಬರುವ ಪ್ರವಾಸಿಗರಿಗೆ ಬೆಂಗಳೂರಿಂದ ಹಾಸನ ನೇರ ರೈಲು ಸಂಪರ್ಕ ಅನುಕೂಲವಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಪರಿಚಾಲನಾ ಪ್ರಭಂದಕ ಗೋಪಿನಾಥನ್ ಅಭಿಪ್ರಾಯಪಟ್ಟರು.
ಈ ರೈಲು ಸಂಪರ್ಕದಿಂದ ಪ್ರವಾಸಿಗರಿಗೆ ಬಹಳ ಅನುಕೂಲವಾಗಲಿದ್ದು. ಶ್ರೀ ಮಠದ ವತಿಯಿಂದ ಪ್ರವಾಸಿಗರ ಅನುಕೂಲಕ್ಕಾಗಿ ಶ್ರವಣಬೆಳಗೊಳದಿಂದ ಹಾಸನ ರೈಲು ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಿಳಿಸಿದರು.
-karanataka jains
loading...
No comments