Breaking News

ಸುನೀಲ್ ಜೋಷಿ ಹತ್ಯೆ ಪ್ರಕರಣ ಸಾದ್ವಿ ಪ್ರಗ್ಯಾ ಸೇರಿದಂತೆ 7 ಆರೋಪಿಗಳ ಖುಲಾಸೆ


ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸುನೀಲ್ ಜೋಷಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸೇರಿದಂತೆ ಏಳು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ರಾಜೀವ್. ಎಂ.ಆಪ್ಟೆ, ಸಾಕ್ಷ್ಯಗಳ ಕೊರತೆಯಿಂದಾಗಿ ಆರೋಪಿಗಳಾದ ಪ್ರಗ್ಯಾ, ಹರ್ಷ ಸೋಳಂಕಿ, ವಸುದೇವ ಪರಾಮರ್, ರಾಮಚರಣ್ ಪಟೇಲ್, ಆನಂದ್ ರಾಜ್ ಕಟಾರಿಯಾ, ಲೋಕೇಶ್ ಶರ್ಮಾ, ರಾಜೇಂದ್ರ ಚೌಧರಿ ಮತ್ತು ಜಿತೇಂದ್ರ ಶರ್ಮಾರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ.

ಪ್ರಗ್ಯಾ ಆತ್ಮಿಯರಾಗಿದ್ದ ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಷಿ 2007ರ ಡಿಸೆಂಬರ್ 29 ರಂದು ಗುಂಡಿಗೆ ಬಲಿಯಾಗಿದ್ದರು

loading...

No comments