Breaking News

ಭಾರತದ ಸ್ಪಿನ್ ಬೌಲರ್ ಅಶ್ವಿನ್ ವಿಶ್ವದಾಖಲೆ


ಹೈದ್ರಾಬಾದ್ : ಭಾರತದ ಶ್ರೇಷ್ಟ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕಮಾತ್ರ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಉರುಳಿಸುವ ಮೂಲಕ ದಾಖಲೆ ಬರೆದರು.

ರವಿಶ್ಚಂದ್ರನ್ ಅಶ್ವಿನ್ ತಾವಾಡಿದ 45 ಟೆಸ್ಟ್ ಪಂದ್ಯಗಳಲ್ಲಿ 250 ವಿಕೆಟ್ ಪಡೆಯುವ ಮೂಲಕ ಅತೀ ವೇಗವಾಗಿ 250 ವಿಕೆಟ್ ಕ್ಲಬ್ ಗೆ ಸೇರಿದ ಮೊದಲ ಬೌಲರ್ ಎನಿಸಿಕೊಂಡರು.ಈ ಮೂಲಕ ದಾಖಲೆ ಬರೆದರು.
loading...

No comments