ಪ್ರಧಾನಿ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ : ಸಂಸತ್ತಿನಲ್ಲಿ ಗದ್ದಲ
ರಾಷ್ಟ್ರಪತಿ ಭಾಷಣದ ಮೇಲೆ ನಡೆದ ಚರ್ಚೆಗೆ ನಿನ್ನೆ ರಾಜ್ಯಸಭೆಯಲ್ಲಿ ಉತ್ತರಿಸುವ ಸಂದರ್ಭದಲ್ಲಿ ಮೋದಿ ವ್ಯಂಗ್ಯಭರಿತ ಮಾತುಗಳನ್ನಾಡಿದ ಬಗ್ಗೆ ಕಾಂಗ್ರೆಸ್ ಸದಸ್ಯರು ಕೆರಳಿ ಮೋದಿ ಕ್ಷಮೆಯಾಚನೆಗೆ ಆಗ್ರಹಿಸಿದ್ದು, ಎರಡು ಸದನಗಳಲ್ಲಿ ಗೊಂದಲ ವಾತಾವರಣ ಉಂಟಾಯಿತು.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ, ಪ್ರಧಾನಿ ಮೋದಿ ಹೇಳಿಕೆಯನ್ನು ನಾಚಿಕೆಗೇಡು ಎಂದು ಜರಿದರು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜತೆ ಸಿಪಿಐ, ಎಐಎಡಿಎಂಕೆ, ಟಿಎಂಸಿ ಸದಸ್ಯರೂ ಸೇರಿ ಪ್ರಧಾನಿ ಕ್ಷಮೆಯಾಚನೆಗೆ ಆಗ್ರಹಿಸಿದರು.
ಅಷ್ಟೇ ಅಲ್ಲದೆ, ವಿರೋಧ ಪಕ್ಷದ ಎಲ್ಲ ಸದಸ್ಯರೂ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೋಲಾಹಲಕ್ಕೆ ಕಾರಣರಾದರು. ಗೊಂದಲ ಕಾರಣದಿಂದಾಗಿ ರಾಜ್ಯಸಭೆಯನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
loading...
No comments