ತಾಯಿಯ ಪಾದ ತೊಳೆದು ಪೂಜೆ ಸಲ್ಲಿಸಿದ ಕೊಪ್ಪಳದ ಮಕ್ಕಳು
ಶಾಲೆಯ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಜನ್ಮದಾತೆಯರಿಗೆ ನಮನ ಸಲ್ಲಿಸಿದರು.
ಯಾಕೆ ಕಾರ್ಯಕ್ರಮ ಆಯೋಜಿಸಿದ್ದು ಎಂದು ಕೇಳಿದ್ದಕ್ಕೆ, ಯುವ ಪೀಳಿಗೆ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದೆ. ಇದರಿಂದ ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲೆ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.
ಸರ್ವೋದಯ ಶಾಲೆಯಲ್ಲಿ `ಜನ್ಮದಾತರಿಗೊಂದು ನಮನ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಕ್ಕಳಿಂದ ಹೆತ್ತವರ ಪಾದ ಪೂಜೆ ಮಾಡಿಸಲಾಯಿತು. ಸುಮಾರು 150 ಕ್ಕೂ ಹೆಚ್ಚು ಪಾಲಕರು ಆಗಮಿಸಿದ್ದರು. ಅವರವರ ಮಕ್ಕಳು ತಮ್ಮ ತಂದೆ-ತಾಯಂದಿರಿಗೆ ಸಾಮೂಹಿಕವಾಗಿ ಪಾದ ಪೂಜೆ ನೆರವೇರಿಸಿದರು. ಜಾತಿ-ಬೇಧ ಎನ್ನದೆ ಎಲ್ಲ ಧರ್ಮದ ತಾಯಂದಿರು ಪಾದ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು
-public tv
loading...
No comments