Breaking News

ಜನಾರ್ಧನ ಪೂಜಾರಿ ಪೂಜಾರಿ ಉಚ್ಛಾಟನೆಗೆ ಪಟ್ಟು


ಬೆಂಗಳೂರು :  ಸೋಮವಾರದಂದು ಬೆಂಗಳೂರಿನಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ  ನಿರಂತರ ಪಕ್ಷ ವಿರೋಧಿ  ಹೇಳಿಕೆಗಳನ್ನು ನೀಡುತ್ತಿರುವ ಬಿ.ಜನಾರ್ಧನ ಪೂಜಾರಿಯನ್ನು ತತ್ ಕ್ಷಣವೇ ಉಚ್ಛಾಟಿಸುವಂತೆ ರಾಜ್ಯದ ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕರೆದ ಸಭೆಯು ಪೂಜಾರಿ ವಿಷಯದಲ್ಲೇ ಅಲ್ಲೋಲ ಕಲ್ಲೋಲವಾಯಿತು. ಮಂಗಳೂರಿನಲ್ಲಿ ಪಕ್ಷದ ವಿರುದ್ಧ ಪತ್ರಿಕಾಗೋಷ್ಠಿ ಕರೆಯುವ ಪೂಜಾರಿ ತಾಕತ್ತಿದ್ದರೆ ಬೆಂಗಳೂರಿನಲ್ಲಿ ಬಂದು ಪತ್ರಿಕಾಗೋಷ್ಠಿ ಕರೆಯಲಿ ಎಂದು ಕಾಂಗ್ರೆಸ್ ಮುಖಂಡರು ಮೇಜು ಗುದ್ದಿ ಸವಾಲೊಡ್ಡಿದ್ದು, ಪೂಜಾರಿ ವಿರುದ್ಧ ಈ ತನಕವೂ ಕ್ರಮ ಕೈಗೊಳ್ಳದ ಕೆಪಿಸಿಸಿ ಅಧ್ಯಕ್ಷರನ್ನೇ ತರಾಟೆಗೆ ತೆಗೆದುಕೊಂಡರೆಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ನಿರಂತರವಾಗಿ ಹೀಯಾಳಿಸುವ ಪೂಜಾರಿ ಬೆಂಗಳೂರು ಬಂದರೆ ಚಪ್ಪಲಿ ಹಾರ ಹಾಕುವುದಾಗಿ ಕುರುಬ ಮಖಂಡರೋರ್ವರು ಗುಡುಗಿದರೆಂದು ತಿಳಿದು ಬಂದಿದೆ.

  ನಂಜನಗೂಡು ಸಹಿತ  ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತವೆಂದು ಹೇಳಿಕೆ ನೀಡಿದ ಪೂಜಾರಿಯನ್ನು ಪಕ್ಷದಿಂದ ಹೊರದಬ್ಬುವಂತೆ ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷರು ಗುಡುಗಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಯವರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳುವಂತೆ ಎಚ್ಚರಿಸಿದ್ದರೆನ್ನಲಾಗಿದೆ. ಸಭೆಯಲ್ಲಿ ರಾಜ್ಯದಾದ್ಯಂತದಿಂದ ಬಂದ ಕಾಂಗ್ರೇಸ್ ನೇತಾರರ ಆಕ್ರೋಶವನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಈ ಬಗ್ಗೆ ಹೈಕಮಾಂಡಿಗೆ ವರದಿ ನೀಡುವುದಾಗಿ ಮಾತ್ರವಲ್ಲ ವಾರದೊಳಗಾಗಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರೆಂದು ತಿಳಿದುಬಂದಿದೆ.



loading...

No comments