ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಾಜ್ಯದ ಜನತೆಗೆ ಮಾಂಸ ಭಾಗ್ಯ.?
ಬೆಂಗಳೂರು : ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ಕುರಿ ಹಾಗೂ ಮೇಕೆ ಸಾಕಾಣಿಕೆದಾರರ ಸಹಕಾರಿ ಸಂಘಗಳ ಮಹಾಮಂಡಳ ಉದ್ಘಾಟಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಅತ್ಯಾಧುನಿಕ ವಧಾಗಾರ ತೆರೆದು ಗ್ರಾಹಕರಿಗೆ ಗುಣಮಟ್ಟದ ಕುರಿ ಮಾಂಸ ಪೂರೈಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಭಾರತದಲ್ಲಿ ಈಗ ಒಬ್ಬರಿಗೆ ವರ್ಷಕ್ಕೆ 5.5ಕೆ.ಜಿ ಮಾಂಸ ಸಿಗುತ್ತಿದೆ,ಆದರೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸಿನ ಪ್ರಕಾರ ಪ್ರತಿ ಮನುಷ್ಯ ಪೌಷ್ಟಿಕ ಆಹಾರವಾಗಿ 11ಕೆ.ಜಿ ಮಾಂಸ ಸೇವಿಸಬೇಕು.ಹಾಗಾಗಿ ಮಾಂಸೋದ್ಯಮಕ್ಕೆ ಆದ್ಯತೆ ನೀಡಿ ಬ್ರಾಂಡ್ ರೂಪದಲ್ಲಿ ಆರೋಗ್ಯಕರ ಮಾಂಸಪೂರೈಕೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಎ ಮಂಜು, ಮಹಾಮಂಡಳದ ಅಡಿಯಲ್ಲಿ 600 ಸಂಘಗಳನ್ನು ರಚಿಸಲಾಗಿದೆ. ಅದರಲ್ಲಿ 200 ಸಂಘಗಳಿಗೆ ತಲಾ 5ಲಕ್ಷದಂತೆ ಸಾಲವನ್ನು ನೀಡಲಾಗಿದೆ ಎಂದರು. ರಾಜ್ಯದಲ್ಲಿ ಪ್ರಸ್ತುತ 30 ಸಾವಿರ ಮೆಟ್ರಿಕ್ ಟನ್ ಕುರಿ ಮಾಂಸ ಹಾಗೂ 20 ಸಾವಿರ ಮೆಟ್ರಿಕ್ ಟನ್ ಮೇಕೆ ಮಾಂಸ ಉತ್ಪಾದನೆಯಾಗುತ್ತಿದೆ. ಈಗ ವರ್ಷಕ್ಕೆ ಒಟ್ಟು 700ಕೋಟಿಯಷ್ಟು ವಹಿವಾಟು ಇದ್ದು, ಮುಂದಿನ ದಿನಗಳಲ್ಲಿ ಮಾಂಸದ ವಹಿವಾಟಿನ ಮೊತ್ತವನ್ನು 2ಸಾವಿರ ಕೋಟಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ ಎಂದರು.
loading...
No comments