Breaking News

ಬಿಜೆಪಿಯಿಂದ ಒಂದು ನಾಯಿಯೂ ಪ್ರಾಣ ಕೊಟ್ಟಿಲ್ಲ ಖರ್ಗೆ ವಿವಾದಾತ್ಮಕ ಹೇಳಿಕೆ



ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಡಿರುವ ಮಾತು ವಿವಾದಕ್ಕೀಡಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಮಾತನಾಡುವಾಗ' ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಲಿದಾನ ಮಾಡಿದ್ದಾರೆ ಬಿಜೆಪಿಯಿಂದ ಒಂದು ನಾಯಿಯು ಪ್ರಾಣ ಕೊಟ್ಟಿಲ್ಲ' ಎಂದರು. ಖರ್ಗೆ ಮಾತಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಸೇರಿದಂತೆ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಖರ್ಗೆ ಹಾಗೂ ಅನಂತ್ ಕುಮಾರ್ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಸದನದಲ್ಲಿ ಆಗ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.
-suvarnanews

loading...

No comments