Breaking News

ಕೋಮು ಗಲಭೆಗೆ ಪ್ರಚೋಧನೆ ನೀಡಿದವರಿಗೆ ಲುಕ್ ಔಟ್ ನೋಟಿಸ್ ಜಾರಿ



ಶಿವಮೊಗ್ಗ :  ಸಹ್ಯಾದ್ರಿ ಕಾಲೇಜಿನಲ್ಲಿ ಬುರ್ಖಾ ವಿವಾದ ಕುರಿತಂತೆ ಚರ್ಚೆ, ವಾಗ್ವಾದ ಆರಂಭಗೊಂಡಿವೆ. ಬೆಂಕಿಗೆ ತುಪ್ಪ ಹಾಕುವಂತೆ ಎರಡು ವಾಟ್ಸಪ್ ವಿಡಿಯೋಗಳು ವಾಟ್ಸಪ್‍ಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. 
ಶಿವಮೊಗ್ಗ ಮೂಲದ ಟಿಪ್ಪುನಗರದ   ರೆಹಮಾನ್‌ ಮತ್ತು ಇಮ್ರಾನ್‌  ಅತ್ಯಂತ ಅಶ್ಲೀಲವಾಗಿ ಒಂದು ಧರ್ಮದವರ ಅವಹೇಳನ ಮಾಡಿ ವಾಟ್ಸಪ್ ವಿಡಿಯೋ ಕಳಿಸಿದ್ದಾರೆ. ಈ ವಿಡಿಯೋ ವಾಟ್ಸ್ ಆಪ್ ಮತ್ತು ಫೇಸ್ಬುಕ್ ನಲ್ಲಿ ವ್ಯಾಪಕವಾಗಿ ಹರಿದಾಡಿದ್ದು 
ಇದಕ್ಕೆ ಪ್ರತಿಯಾಗಿ ಶಿವಮೊಗ್ಗದ ಮತ್ತೊಬ್ಬ ಯುವಕ ಪ್ರೀತಮ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಸಂದೇಶ ಸಹ ಹರಿದಾಡುತ್ತಿದೆ. ಈ ಮೂರೂ ಯುವಕರ ಸಂದೇಶಗಳು ಜಿಲ್ಲೆಯಲ್ಲಿ ತೀವ್ರ ಚರ್ಚೆಗೀಡು ಮಾಡಿದ್ದು, ಯುವಜನರನ್ನು ಪ್ರಚೋದಿಸುವುದರ ಜತೆಗೆ ಕೆಲವರಲ್ಲಿ ಆತಂಕವನ್ನೂ ಉಂಟು ಮಾಡಿದೆ.

ಕೋಮು ಗಲಭೆಗೆ ಪ್ರಚೋದಿಸಿ ಕಲಹಕ್ಕೆ ಕಾರಣವಾಗುವಂತಹ ಸಂದೇಶಗಳು ಪೊಲೀಸರನ್ನು ತಲುಪಿ ಅವುಗಳ ಸೃಷ್ಟಿಕರ್ತರು ಯಾರೆಂಬುದರ ಬೆನ್ನತ್ತಿ ಹೋದಾಗ ಈ ಮೂವರು ಯುವಕರ ಹೆಸರುಗಳು ಪತ್ತೆಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆಯು ಕೋಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದೆ. ರಿಯಾದ್ ನಲ್ಲಿ ಇರುವ  ಶಿವಮೊಗ್ಗ ಮೂಲದ ಯುವಕರ ವಿರುದ್ಧ ಲುಕೌಟ್‌ ಹೊರಡಿಸಿದೆ. ಶಿವಮೊಗ್ಗದ ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ 


loading...

No comments