Breaking News

ಉಡುಪಿ ಪೇಜಾವರ ಮಠವನ್ನುದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೋದಿ ಹೇಳಿದ್ದೇನು



ಉಡುಪಿ : ಮಧ್ವ ನವಮಿ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಮಧ್ವ ಸಪ್ತ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಮಾನ್ಯ ಜನತೆಯೇ ದೇಶದ ನಿಜವಾದ ಶಕ್ತಿಯಾಗಿದ್ದು, ಪ್ರತಿಯೊಬ್ಬರೂ ದೇಶದ ಬದಲಾವಣೆಗಾಗಿ ಅದ್ಭುತ ಕೆಲಸಗಳನ್ನು ಮಾಡಬಹುದು ಎಂದು  ಹೇಳಿದ್ದಾರೆ. 
ಧಾರ್ಮಿಕ ಶ್ರದ್ಧೆಯ ಜೀವನ ನಡೆಸಲು ಎಲ್ಲರಿಗೂ ಸರಿಯಾದ ಮಾರ್ಗವನ್ನು ತಿಳಿಸುವ ಅಗತ್ಯವಿದೆ. ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ನೀಡಿರುವ ವಿದ್ವಾಂಸರು, ಸಂತರು ಯುವ ಪೀಳಿಗೆಗೆ ದಾರಿ ದೀಪವಾಗಿದ್ದಾರೆ.  ಮತಾಂಧತೆ ಭಯಹುಟ್ಟಿಸುವ ಸಮಸ್ಯೆಗಳಿಗೆ ಇದೇ ಪರಿಕಲ್ಪನೆ ಉತ್ತರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಸೇರಿದಂತೆ ಶ್ರೇಷ್ಠ ವ್ಯಕ್ತಿಗಳು ಮಾನವ ನಿಷ್ಠೆ, ಮಾನವೀಯತೆಗೆ ಹೆಚ್ಚಿನ ಮಹತ್ವವನ್ನು ಸಾರಿದ್ದರು. ಇದೇ ತತ್ವಗಳು ಭಾರತದಾದ್ಯಂತ ಪಸರಿಸಿದವು. ನಂತರದಲ್ಲಿ ದಾಸ ಪಂಥದಲ್ಲಿ ಬಂದಂತಹ ತುಳಸಿದಾಸ, ಚೈತನ್ಯದೇವರು, ಗುರುನಾನಕ್, ರಮಾನಂದ, ಕಬೀರ್ ದಾಸ್, ಸೂರ್ ದಾಸ್ ರಂಥವರು ಸಹ ಸಮಾಜದ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.


  ಮೋದಿ ವಿಡಿಯೋ ಕಾನ್ಫರೆನ್ಸ್ ಒಂದು ತುಣುಕು 



loading...

No comments