Breaking News

ಪಾಕಿಸ್ತಾನದ ಗೂಢಾಚಾರಿಯ ಬಂಧನ


ರಾಜಸ್ಥಾನ (ANI) : ರಾಜಸ್ಥಾನದ ಜೈಸಲ್ಮರ್ ನಲ್ಲಿ ​ಸಿಐಡಿ ಮತ್ತು ಗಡಿ ಗುಪ್ತಚರ ಇಲಾಖೆಯ ಪೋಲೀಸರು ರವಿವಾರ ಪಾಕಿಸ್ತಾನದ ಗೂಢಾಚಾರಿಯೊಬ್ಬನನ್ನು ಬಂಧಿಸಿದ್ದಾರೆ. ಸಾಧಿಕ್ ಬಂಧಿತ ಆರೋಪಿ, ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಭಾರತದ ರಹಸ್ಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ. 

ಆರೋಪಿ ಸಾಧಿಕ್ ನನ್ನು ವಿಚಾರಣೆ ನಡೆಸಿದ ಪೋಲೀಸರು ಆತನ ಬಳಿಯಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಆತನ ವಿರುದ್ಧ ಅಧಿಕೃತ ರಹಸ್ಯಗಳ ಖಾಯಿದೆ 1923 ದಾಖಲಿಸಲಾಗಿದೆ.

ಕಳೆದ ವಾರದ ಪ್ರಾರಂಭದಲ್ಲೂ ಜೈಸಲ್ಮರ್ ನಿವಾಸಿಯೊಬ್ಬನನ್ನು ಬಂಧಿಸಿದ ಪೋಲೀಸರು ವ್ಯಕ್ತಿಯೊಬ್ಬನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ರಹಸ್ಯ ವಿನಿಮಯ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಿದ್ದರು.
-ani

loading...

No comments