Breaking News

ಕರ್ನಾಟಕದಲ್ಲಿ 2018ಕ್ಕೆ ಬಿಜೆಪಿ ಆಟ ನಡೆಯಲ್ಲ: ಎಚ್‍ಡಿಕೆ


ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯುವ ಉಪಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಫರ್ಧಿಸುವ ಕುರಿತು ಮಾರ್ಚ್ 15ರಂದು ರಾಷ್ಟ್ರೀಯ ಅಧ್ಯಕ್ಷರು ನಮ್ಮ ಶಾಸಕರ ಜೊತೆ ಸಭೆ ನಡೆದ ಬಳಿಕ ನಿರ್ಧರಿಸುತ್ತೇವೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್ ಮಧ್ಯೆ ಕೆಸರೆರಚಾಟ ನಡೆಯುತ್ತಿದೆ. ಧರ್ಮ, ಅಧರ್ಮದ ಮಾತಿನ ಯುದ್ಧ ನಡೆಯುತ್ತಿದೆ. ಇವರಿಬ್ಬರ ಕಿತ್ತಾಟದ ಮಧ್ಯೆ ನಾವು ಅಭ್ಯರ್ಥಿ ಹಾಕ್ಬೇಕಾ ಅಂತ ಯೋಚಿಸುತ್ತಿದ್ದೇನೆ. ಆದ್ರೆ ನನ್ನ ದಾರಿಯೇ ಬೇರೆ ಇದೆ ಅಂತಾ ಹೇಳಿದ್ರು.

ಎಸ್‍ಪಿ ಜಗಳದಿಂದ ಬಿಜೆಪಿಗೆ ಗೆಲುವು: ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಅವರು, ಯುಪಿಯಲ್ಲಿ ಕೇಂದ್ರದ ಅಭಿವೃದ್ಧಿ ಮೇಲೆ ಅಲ್ಲಿ ಬಿಜೆಪಿ ಗೆದ್ದಿಲ್ಲ. ಅಲ್ಲಿನ ಎಸ್ ಪಿ ಒಳಜಗಳದ ಲಾಭಪಡೆದಿದೆ ಅಷ್ಟೇ. ರಾಜ್ಯದಲ್ಲಿ ಅದರ ಎಫೆಕ್ಟ್ ಏನೂ ಆಗಲ್ಲ. ಬಿಜೆಪಿ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಾಗಿಲ್ಲ. ಮೋದಿ, ಶಾ ಯಾವ ಆಧಾರದ ಮೇಲೆ ಮತ ಕೇಳ್ತಾರೆ. ಅವರು ಇಲ್ಲಿ ಬಂದು ಏನು ಭಾಷಣ ಮಾಡ್ತಾರೆ. ಯುಪಿಯಲ್ಲಿ ಏನು ನಡೆದಿದೆ ಎಂಬುದು ನನಗೆ ಗೊತ್ತಿದೆ. ಅಲ್ಲಿ ಹಲವು ಐಎಎಸ್ ಅಧಿಕಾರಿಗಳು ನನ್ನ ಸ್ನೇಹಿತರಿದ್ದಾರೆ. ಬಿಜೆಪಿ ಗೆದ್ದಿದ್ದರ ಬಗ್ಗೆ ಎಲ್ಲ ಮಾಹಿತಿ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೋಮುವಾದಕ್ಕೆ ಅವಕಾಶ ಕೊಡಲ್ಲ. ಕರ್ನಾಟಕದಲ್ಲಿ 2018ಕ್ಕೆ ಬಿಜೆಪಿ ಆಟ ನಡೆಯಲ್ಲ ಎಂದು ಹೇಳಿದರು
-public tv

loading...

No comments