Breaking News

ಉಸ್ತುವಾರಿ ಸಚಿವರ ಕಡೆಗಣಿಸಿ ಕಾಮಗಾರಿ ಉದ್ಘಾಟಿಸಲು ಸಜ್ಜಾದ ಸುನಿಲ್ ಕುಮಾರ್ : ಭಂಡಾರಿ ಆರೋಪ


ಕಾರ್ಕಳ : ನಲ್ಲೂರು ಕೂಷ್ಮಾಂಡಿನಿ ದೇವಿ ಬಸದಿಗೆ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸುವ ಕೂಡುರಸ್ತೆಗೆ 2015-16ನೇ ಸಾಲಿನ ಆರ್ ಐ ಡಿ ಎಫ್ 21ರಡಿ ನಬಾರ್ಡ್ ಯೋಜನೆಯಲ್ಲಿ ರಾಜ್ಯ ಸರಕಾರ ರೂ 2 ಕೋಟಿ ಮಂಜೂರುಗೊಳಿಸಿದ್ದು, ಸ್ಥಳೀಯ ಶಾಸಕ ಸುನಿಲಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಾರದೇ ಉದ್ಫಾಟಿಸಲು ಸಜ್ಜಾಗಿರುವುದು ಖಂಡನೀಯ ಎಂದು ಮಾಜಿ ಶಾಸಕ ಎಚ್ ಗೋಪಾಲ ಭಂಡಾರಿ ಹೇಳಿದ್ದಾರೆ.
ರಾಜ್ಯ ಸರಕಾರದಿಂದ ಒಟ್ಟು 19 ಪ್ರವಾಸಿತಾಣಗಳ ಕೂಡು ರಸ್ತೆಗಳ ಅಭಿವೃದ್ಧಿಗೆ ಒಟ್ಟು ರೂ 60.52 ಕೋಟಿ ಮಂಜೂರಾತಿಯಾಗಿದ್ದು, ಅದರಲ್ಲಿ ಉಡುಪಿ ಜಿಲ್ಲೆಯ ನಲ್ಲೂರು ಕೂಷ್ಮಾಂಡಿನಿ ಬಸದಿ ಸಂಪರ್ಕ ರಸ್ತೆಯೂ ಒಂದಾಗಿದೆ. ನನ್ನ ಶಾಸಕತ್ವದ ಅವಧಿಯಲ್ಲಿ ಈ ರಸ್ತೆಯಲ್ಲಿ ಮೋರಿಯೂ ಸೇರಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿತ್ತು. 2015ರ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿದ ರಾಜ್ಯದ ಮಾನ್ಯ ಮುಖ್ಯಮಂತ್ರಿಗೆ ಬಸದಿಗೆ ಸಂಬಂಧಪಟ್ಟ ಅಭಿವೃದ್ಧಿ ಸಮಿತಿಯ ಒತ್ತಾಸೆಯ ಮೇರೆಗೆ ಈ ಕುರಿತು ಮನವಿಯನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಕಡತಗಳು ನಮ್ಮಲ್ಲಿ ಲಭ್ಯವಿದೆ. ಆದರೆ ಈಗಿನ ಶಾಸಕರು ತನ್ನ ಬೆಂಬಲಿಗರೊಂದಿಗೆ ಬೀದಿ ಬದಿ ಫ್ಲೆಕ್ಸ್ ಹಾಕಿ ತನ್ನ ಸಾಧನೆ ಎಂದು ಬಿಂಬಿಸಲು ಯತ್ನಿಸುತ್ತಿರುವುದು ವಿಪರ್ಯಾಸ. ಮಂಜೂರು ಮಾಡಿದ ಸರಕಾರ, ಶಿಫಾರಸು ಮಾಡಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಅವಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
loading...

No comments