Breaking News

ಭಾರತೀಯ ವಿಜ್ಞಾನ ಭವನದ ಮೇಲೆ ದಾಳಿ ಉಗ್ರ ಹಬೀಬ್ ವಿಚಾರಣೆ



ಬೆಂಗಳೂರು : ನಗರದ ಭಾರತೀಯ ವಿಜ್ಞಾನ ಭವನದ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಹಬೀಬ್ ಮಿಯಾನನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿರುವ ನಗರ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಭಾರತೀಯ ವಿಜ್ಞಾನ ಭವನದಲ್ಲಿ ೨೦೦೫ರ ಡಿಸೆಂಬರ್ ೨೮ರಂದು ಶೂಟೌಟ್ ನಡೆದಿತ್ತು. ಈ ದಾಳಿಯಲ್ಲಿ ಗಣಿತ ಪ್ರಾಧ್ಯಾಪಕ ಮನೀಷ್ ಚಂದ್ರಪುರಿ ಅವರನ್ನು ಉಗ್ರರು ಹತ್ಯೆಗೈದಿದ್ದರು. ಅಲ್ಲದೇ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಎಟಿಎಸ್ ಪೊಲೀಸರ ವಶದಲ್ಲಿದ್ದ ಶಂಕಿತ ಉಗ್ರ ಹಬೀಬ್‌ಮಿಯಾನ್ನು ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದನ್ನು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ.

ಪಶ್ಚಿಮ ತ್ರಿಪುರಾ ಜಿಲ್ಲಾ ನ್ಯಾಯಾಧೀಶ ಮಿಲಿಂದ್ ರಾಮ್ತೇಖೆ ಅವರು ಹಬೀಬ್ ಮಿಯಾನನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸುವಂತೆ ಆದೇಶಿಸಿದರು.
ಆರೋಪಿ ನಗರದ ಹೊರವಲಯದ ಜೋಗೇಂದ್ರನಗರದ ನಿವಾಸಿಯಾಗಿದ್ದಾನೆ. ೨೦೦೫ರಲ್ಲಿ ಬೆಂಗಳೂರಿನ ಐಐಎಸ್ ಮೇಲೆ ನಡೆದ ದಾಳಿಯಲ್ಲಿ ಒಟ್ಟು ೭ ಮಂದಿಯ ವಿರುದ್ಧ ದೋಷಾರೋಪಟ್ಟಿ ಸಲ್ಲಿಸಲಾಗಿತ್ತು.
loading...

No comments