Breaking News

ಪ್ರಪಾತಕ್ಕೆ ಬಿದ್ದ ಗೂಳಿಯನ್ನು ರಕ್ಷಿಸಿದ ಸಮಾಜ ಸೇವಕರು

ಉಡುಪಿ : ಸುಮಾರು 60 ಅಡಿ ಪ್ರಪಾತಕ್ಕೆ ಬಿದ್ದಿದ್ದ ಗೂಳಿಯನ್ನು ಸಮಾಜ ಸೇವಕರು ಒಟ್ಟು ಸೇರಿ ಕ್ರೇನ್ ಮೂಲಕ ಮೇಲಕ್ಕೆತ್ತಿ ಮಾನವೀಯತೆ ಮೆರೆದ ಘಟನೆ ಉಡುಪಿ ಕುಕ್ಕಿಕಟ್ಟೆ ರೈಲ್ವೇ ಹಳಿ ಪಕ್ಕ ನಡೆದಿದೆ.

ನಾಲ್ಕು ದಿನಗಳ ಹಿಂದೆ ಗೂಳಿಯೊಂದು ರೈಲು ಅಪಘಾತದಿಂದ ಗಾಯಗೊಂಡು ನೀರು ಆಹಾರ ಇಲ್ಲದೇ ಪ್ರಪಾತದಲ್ಲಿತ್ತು. ಈ ಬಗ್ಗೆ ಅಲೆವೂರು ಯುವಕ ಸಂಘದ ಸದಸ್ಯರು ಸಮಾಜ ಸೇವಕ ವಿಶು ಶೆಟ್ಟಿ ಅವರ ಗಮನಕ್ಕೆ ತಂದರು. ಬಳಿಕ ತಡಮಾಡದ ಇವರು ಮಂಗಳವಾರ ಸಂಜೆಯೇ ಗೂಳಿಯನ್ನು ಪ್ರಪಾತದಿಂದ ಮೇಲಕ್ಕೆತ್ತಲು ಕಾರ್ಯಾಚರಣೆ ಶುರು ಮಾಡಿದರು. ಕತ್ತಲಾದ ಕಾರಣ ಮರುದಿನ ಮುಂಜಾನೆ 6 ಗಂಟೆಗೆ ಕಾರ್ಯಾಚರಣೆ ಪ್ರಾರಂಭಿಸಿದರು.

ಪ್ರಪಾತದಲ್ಲಿದ್ದ ಗೂಳಿಯನ್ನು ತೆಗೆಯುವುದು ಕೂಡಾ ಬಹಳ ಪ್ರಯಾಸವಾಗಿತ್ತು. ಗೂಳಿ ಇದ್ದ ಜಾಗವನ್ನು ತಲುಪಲು ಸಾಧ್ಯವಾಗದೇ ಇದ್ದಾಗ ಜೆಸಿಬಿ ತರಿಸಿ ದಾರಿ ಮಾಡಲಾಯಿತು. ಗೂಳಿಯ ಸೊಂಟದ ಭಾಗಕ್ಕೆ ಬೆಲ್ಟ್ ಸಿಕ್ಕಿಸಿ ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಈ ಸಂದರ್ಭ ಗೂಳಿ ನೋವಿನಿಂದ ಒದ್ದಾಡಿ ಕೊಸರಾಡಿತು. ಬೀಳುವ ಸ್ಥಿತಿಯಲ್ಲಿದ್ದ ಅದಕ್ಕೆ ಮತ್ತೆ ಅರಿವಳಿಕೆ ಚುಚ್ಚುಮದ್ದು ಕೊಟ್ಟು ನಿಧಾನವಾಗಿ ಮೇಲಕ್ಕೆತ್ತಲಾಯಿತು.

ಗೂಳಿ ಕಾರ್ಯಚರಣೆಗೆ ಜೆಸಿಬಿಯನ್ನು ಅಭಿನಂದನ್ ಶ್ರೀಧರ್ ಶೆಟ್ಟಿ ಹಾಗೂ ಕ್ರೇನನ್ನು ಸುಧೀರ್ ಶೆಟ್ಟಿ ಉಚಿತವಾಗಿ ನೀಡಿದರು. ಅಲ್ಲದೆ ಉಚಿತ ವೈದ್ಯಕೀಯ ಸೇವೆಯನ್ನು ಡಾ ಸಂದೀಪ್ ಶೆಟ್ಟಿ ಮಾಡಿದರು. ಸಾಮಾಜಿಕ ಕಾರ್ಯಕರ್ತ ಕೃಷ್ಣ ಅಂಬಲಪಾಡಿಯವರಿಗೆ ಅಲೆವೂರು ಯುವಕ ಸಂಘದ ಸದಸ್ಯರು ಸಹಕಾರ ನೀಡಿದರು.
-k-ale

loading...

No comments