ಮಹಿಳಾ ನಿಂದನೆ ಟ್ರೋಲ್ ಹೈಕ್ಳು ವಿರುದ್ಧ ಸೈಬರ್ ಕ್ರೈಂನಲ್ಲಿ ದೂರು
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೈಕ್ಳು ಎನ್ನುವ ಪೇಜ್ ಮೂಲಕ ಮಹಿಳೆಯರ ಮೇಲೆಯೇ ಕೇಂದ್ರ ಬಿಂದುವಾಗಿ ಅವರನ್ನು ಚಿತ್ರ ವಿಚಿತ್ರವಾಗಿ ಟ್ರಾಲ್ ಮಾಡುತ್ತಿರುವುದರಿಂದ ಮಹಿಳೆಯರ ಘನತೆಗೆ ಧಕ್ಕೆ ತಂದಿದೆ ಎಂದು ಸಮಾನ ಮನಸ್ಕ ಮಹಿಳೆಯರ ಗುಂಪೊಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ.
ದೂರು ನೀಡುವುದಕ್ಕೂ ಮುನ್ನ ಇವರು ಟ್ರೋಲ್ ಪೇಜ್ ಕ್ರಿಯೆಟ್ ಮಾಡಿದವರ ಹತ್ತಿರ ಚಾಟ್ ಮಾಡಿದ್ದಾರೆ. ಈ ರೀತಿ ಟ್ರೋಲ್ ಮಾಡುತ್ತಿರುವುದರಿದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರೀತಿಯ ಟ್ರಾಲ್‍ಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಈ ಮಾತನ್ನು ಕೇಳದೇ ಅವರು ಇವರಿಗೆ ಟ್ರಾಲ್ ಮಾಡಿ ಬೈದಿದ್ದಾರೆ. ಈ ಕಾರಣಕ್ಕಾಗಿ ಇಂದು ಸೈಬರ್ ಪೋಲೀಸರಿಗೆ ದೂರು ನೀಡಿದ ಯುವತಿಯರು ಇವರ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಮನವಿ ಮಾಡಿದ್ದಾರೆ.
– ಸ್ನೇಹ ಕಿರಣ್, ದೂರು ನೀಡಿದವರು
loading...
No comments