Breaking News

ಬಾರಿ ವಿರೋಧದ ನಡುವೆಯೂ ಡಬ್ಬಿಂಗ್ ಚಿತ್ರ ಸತ್ಯದೇವ ಐಪಿಎಸ್ ಇಂದು ಬಿಡುಗಡೆ.

ಬೆಂಗಳೂರು : ಭಾರೀ ವಿರೋಧದ ನಡುವೆಯೂ ಕನ್ನಡದಲ್ಲಿ ಮೊದಲ ಡಬ್ಬಿಂಗ್ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.ತಮಿಳಿನಲ್ಲಿ ಅಜಿತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ತಮಿಳಿನ ಎನೈ ಅರಿಂದಾಲ್ ಸಿನಿಮಾವನ್ನು ಕನ್ನಡದಲ್ಲಿ ಸತ್ಯದೇವ ಐಪಿಎಸ್ ಎಂದು  ಡಬ್ ಮಾಡಲಾಗಿದೆ. ಸತ್ಯದೇವ ಐಪಿಎಸ್ ಸಿನಿಮಾ ಸದ್ಯಕ್ಕೆ ಬೆಂಗಳೂರು ನಗರದಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಿಗೆ ಮೈಸೂರು, ಹುಬ್ಬಳ್ಳಿ, ಗದಗ್, ಹೊಸಪೇಟೆಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ.
ಕಳೆದ 55ವರ್ಷಗಳಿಂದಲೂ ಕನ್ನಡ ಚಿತ್ರರಂಗ ಡಬ್ಬಿಂಗ್ ವಿರೋಧವಾಗಿ ಹೋರಾಟ ಮಾಡುತ್ತಲೇ ಇದೆ.  ವರನಟ ಡಾಕ್ಟರ್ ರಾಜ್ ಕುಮಾರ್ ಸೇರಿದಂತೆ ಕನ್ನಡದ ಅನೇಕ ನಟರು, ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದು ಡಬ್ಬಿಂಗ್ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಈಗ ಸತ್ಯದೇವ ಐಪಿಎಸ್ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಜಗ್ಗೇಶ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ನಟರು ಡಬ್ಬಿಂಗ್ ವಿರೋಧಿಸಿ ಈಗಾಗಲೇ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಡಬ್ಬಿಂಗ್ ವಿರೋಧಿಸಿ ಹೋರಾಟಗಳು ತೀವ್ರ ಸ್ವರೂಪ ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ತಮಿಳಿನ ಎನ್ನೈ ಅರಿಂದಾಳ್, ಸತ್ಯದೇವ್ ಐಪಿಎಸ್ ಆಗಿ ಕನ್ನಡಕ್ಕೆ ಡಬ್ಬಿಂಗ್ ಮಾಡಿರೋದು ನಿರ್ಮಾಪಕ ಜಿ.ಕೃಷ್ಣಮೂರ್ತಿ. ಸತ್ಯದೇವ ಐಪಿಎಸ್ ಬಿಡುಗಡೆಯಾಗುವುದು ಖಚಿತ ಅದರಲ್ಲಿ ಎರಡು ಮಾತಿಲ್ಲ ಎಂದು ಕರ್ನಾಟಕದ ಡಬ್ಬಿಂಗ್ ಮಂಡಳಿ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡ ಹೇಳಿದ್ದಾರೆ.60 ಸಿನಿಮಾ ಮಂದಿರಗಳಲ್ಲಿ ಸತ್ಯದೇವ ಐಪಿಎಸ್ ತೆರೆಗೆ ಬರುತ್ತಿದ್ದು, ಥಿಯೇಟರ್ ಗಳ ಸಂಖ್ಯೆಯಲ್ಲಿ ಏರುಪೇರು ಆಗಬಹುದು ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
loading...

No comments