Breaking News

ಆಸೀಸ್ ಡ್ರೆಸ್ಸಿಂಗ್ ರೂಂಗೆ ಬಾಟಲಿ ತೂರಿದರೇ ಕೋಹ್ಲಿ?


ಹೊಸದಿಲ್ಲಿ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವಣ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಸದ್ಯಕ್ಕಂತೂ ಬಗೆಹರಿಯುವ ಲಕ್ಷ್ಮಣಗಳು ಕಾಣುತ್ತಿಲ್ಲ. ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಡಿಆರ್‌ಎಸ್ ಮೋಸ ಮಾಡಲು ಯತ್ನಿಸಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ್ದಲ್ಲಿ ಹೊಸ ಬೆಳವಣಿಗೆಯಲ್ಲಿ ಆಸೀಸ್ ಪ್ರತಿಷ್ಠಿತ ಪತ್ರಿಕೆಯೊಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಅಸಭ್ಯವಾಗಿ ನಡವಳಿಕೆಯನ್ನು ತೋರಿದ್ದಾರೆಂದು ಆರೋಪಿಸಿದೆ.

ಆಸ್ಟ್ರೇಲಿಯಾದ ಪತ್ರಿಕೆ ಡೈಲಿ ಟೆಲಿಗ್ರಾಫ್ ವರದಿ ಮಾಡಿರುವಂತೆಯೇ, ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಕೋಹ್ಲಿ ಅವರನ್ನು ಎಲ್‌ಬಿಡಬ್ಲ್ಯುಗಾಗಿ ಔಟ್ ನೀಡಲಾಗಿತ್ತು. ಕೋಹ್ಲಿ ಡಿಆರ್‌ಎಸ್‌ಗಾಗಿ ಮನವಿ ಮಾಡಿದರೂ ಯಾವುದೇ ಫಲವುಂಟಾಗಲಿಲ್ಲ. ಬಳಿಕ ತೀವ್ರ ಕುಪಿತರಾದ ವಿರಾಟ್ ಕೋಹ್ಲಿ ಗೆಟೊರೇಡ್(ಹಣ್ಣಿನ ಪಾನೀಯದ) ಬಾಟಲಿಯನ್ನು ಆಸೀಸ್ ಡ್ರೆಸ್ಸಿಂಗ್ ಕೊಠಡಿಗೆ ಎಸೆದಿದ್ದರು ಎಂದು ಆರೋಪಿಸಿದೆ. ಆಸೀಸ್ ಡ್ರೆಸ್ಸಿಂಗ್ ಕೊಠಡಿಯಲ್ಲಿ ಟಿವಿ ಮೇಲೆ ಬಿದ್ದ ಬಾಟಲಿ ಆಸೀಸ್ ತಂಡದ ಅಧಿಕಾರಿಯ ಕಾಲಿಗೆ ಬಂದು ಅಪ್ಪಳಿಸಿತ್ತು ಎಂಬುದಾಗಿಯೂ ಪತ್ರಿಕೆ ತಿಳಿಸುತ್ತದೆ.

loading...

No comments