ಮದ್ರಸ ಶಿಕ್ಷಕನ ಬರ್ಬರ ಹತ್ಯೆ ಬೂದಿ ಮುಚ್ಚಿದ ಕೆಂಡದಂತಾದ ಕಾಸರಗೋಡು
ಕಾಸರಗೋಡು: ಕತ್ತು ಸೀಳಿ ಮದ್ರಸ ಶಿಕ್ಷಕರೊಬ್ಬರನ್ನು ಕೊಲೆ ನಡೆಸಿದ ಘಟನೆ ನಿನ್ನೆ ತಡರಾತ್ರಿ ಕಾಸರಗೋಡು ಹೊರವಲಯದ ಬೆಟ್ಟಂಪಾರೆಯ ಹಳೆಚೂರಿಯಲ್ಲಿ ನಡೆದಿದೆ.
ಮೃತರನ್ನು ಇಜ್ಜತ್ತುಲ್ ಇಸ್ಲಾಂ ಮದ್ರಸ ಶಾಲೆಯ ಶಿಕ್ಷಕ, ಮಡಿಕೇರಿ ಮೂಲದ ರಿಯಾಝ್ (೩೪) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂಬತ್ತು ವರ್ಷಗಳಿಂದ ಮದ್ರಸದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ತಡರಾತ್ರಿ ಇವರು ವಾಸಿಸುತ್ತಿದ್ದ ಕಟ್ಟಡದ ಸಮೀಪದಲ್ಲೇ ಇವರ ಮೃತದೇಹವು ಕತ್ತು ಸೀಳಿದ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಿಯಾಝ್ ಹಾಗೂ ಮಸೀದಿಯ ಖತೀಬ್ ಅಬ್ದುಲ್ ಅಝೀಜ್ ಅಕ್ಕಪಕ್ಕದ ಕೊಠಡಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ನಿನ್ನೆ ತಡರಾತ್ರಿ ಸುಮಾರು ೧೨:೧೫ರ ವೇಳೆ ಅಝೀಜ್ ಅವರಿಗೆ ಮನೆಯ ಹೊರ ಆವರಣದಲ್ಲಿ ಚೀರಾಟ ಕೇಳಿ ಬಂದಿದೆ. ಕೂಡಲೇ ಅಝೀಜ್ ಅವರು ಬಾಗಿಲು ತೆರೆಯುವ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೂಡಲೇ ಬಾಗಿಲು ಮುಚ್ಚಿ ಒಳ ದಾರಿಯನ್ನು ಬಳಸಿಕೊಂಡ ಅಝೀಜ್ ಅವರು ಮದ್ರಸ ತಲುಪಿ, ಮೈಕ್ ಮೂಲಕ ನಡೆದ ಸಂಗತಿಯನ್ನು ಸ್ಥಳೀಯ ಜನರಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಕೂಡಲೇ ಸ್ಥಳೀಯರು ಮದ್ರಸಕ್ಕೆ ಆಗಮಿಸಿದ ವೇಳೆ ರಿಯಾಝ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ರಿಯಾಝ್‌ರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಡಿಎಸ್‌ಪಿ ವಿ. ಸುಕುಮಾರನ್, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಅಬ್ದುಲ್ ರೆಹ್ಮಾನ್ ನೇತೃತ್ವದ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿ, ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.
ಹರತಾಳಕ್ಕೆ ಕರೆ
ಮದ್ರಸ ಶಿಕ್ಷಕನ ಕೊಲೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ ಬಿಗಿ ಪೊಲೀಸ್ ಭದ್ರತೆ ನಡುವೆಯೂ ಮುಸ್ಲಿಂ ಲೀಗ್ ಮತ್ತು sdpi ಈಗಾಗಲೇ ಹರತಾಳ ನಡೆಸಿದೆ ಎಂದು ತಿಳಿದು ಬಂದಿದೆ
loading...
No comments