Breaking News

ಧನುಷ್ ಡಿಎನ್ಎ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ ಮದ್ರಾಸ್ ಹೈಕೋರ್ಟ್.

ತಮಿಳುನಾಡು : ತಮಿಳಿನ ಹೆಸರಾಂತ ನಟ, ರಜನೀಕಾಂತ್ ಅಳಿಯ ಧನುಷ್ ಡಿ.ಎನ್.ಎ ಟೆಸ್ಟ್ ಪರೀಕ್ಷೆ ನಡೆಸಲು ಮದ್ರಾಸ್ ಹೈಕೋರ್ಟು ಆದೇಶ ನೀಡಿದೆ.ಧನುಷ್ ತಮ್ಮ ಮಗ, ಶಾಲೆಗೆ ಹೋಗುತ್ತಿದ್ದಾಗ ಸಣ್ಣ ವಯಸ್ಸಿನಲ್ಲೇ ಕಣ್ಮರೆಯಾಗಿದ್ದ. ಬಹಳ ಹುಡುಕಿದರೂ ಸಿಕ್ಕಿರಲಿಲ್ಲ, ಈಗ ಆತನ ಸಿನಿಮಾ ನೋಡಿ ಆತನೇ ತಮ್ಮ ಮಗ ಎಂದು ಗೊತ್ತಾಗಿದ್ದಾಗಿ ತಮಿಳುನಾಡಿನ ಮೇಲೂರಿನ ಮಲಂಪಟ್ಟಿಯ ಕದಿರೇಸನ್ ಮತ್ತು ಮೀನಾಕ್ಷಿ ಎಂಬ ವೃದ್ಧ ದಂಪತಿ ಹೇಳುತ್ತಿದ್ದಾರೆ.

ನಮ್ಮ ಮೂವರು ಮಕ್ಕಳಲ್ಲಿ ಧನುಷ್ ಒಬ್ಬನಾಗಿದ್ದು ನಮಗೆ ನ್ಯಾಯ ಕೊಡಿಸುವಂತೆ ದಂಪತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗಾಗಲೇ ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಧನುಷ್ ಈ ಎಲ್ಲಾ ವಿಷಯಗಳಿಂದ ರೋಸಿ ಹೋಗಿದ್ದಾರೆ.

ಕಳೆದ ಗುರುವಾರ ಕದಿರೇಸನ್ ಅವರು ಧನುಷ್ ಡಿ.ಎನ್.ಎ ಪರೀಕ್ಷೆ ಮಾಡಿಸಿ ಆತ ನಮ್ಮ ಮಗ ಎಂಬುದು ಗೊತ್ತಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠಕ್ಕೆ ನೀಡಿದ ಅರ್ಜಿಯಲ್ಲಿ ಮನವಿ ಮಾಡಿದ್ದರು. ಕದಿರೇಸನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಡಿಎನ್ಎ ಪರೀಕ್ಷೆ ಮಾಡಿಸುವಂತೆ ಆದೇಶಿಸಿದೆ. ಪರೀಕ್ಷೆ ನಂತರ ಸತ್ಯ ಹೊರಬೀಳಲಿದ್ದು ಧನುಷ್ ಜನ್ಮ ರಹಸ್ಯ ಗೊತ್ತಾಗಲಿದೆ. ಸದ್ಯ ತಮಿಳುನಾಡಿನಲ್ಲಿ ಇದರ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.
loading...

No comments