ಕೆಲವೇ ದಿನ ಬದುಕಲಿರುವ ಅಭಿಮಾನಿಯ ಆಸೆ ಈಡೇರಿಸಲಿದ್ದಾರೆ ಶಿವಣ್ಣ
ಮೈಸೂರು: ನಾನು ಸಾಯುವ ಮುನ್ನ ಶಿವರಾಜ್ಕುಮಾರ್ನನ್ನು ಒಮ್ಮೆ ತೋರಿಸಿ ಪ್ಲೀಸ್’. ತನ್ನ ಎರಡು ಕಿಡ್ನಿ ಕಳೆದುಕೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ಸಾವಿನ ದಿನಗಳನ್ನು ಎಣಿಸುತ್ತಿರುವ ಯುವಕನೊಬ್ಬನ ಕಡೆಯ ಆಸೆ ಇದು.ಈ ಬಗ್ಗೆ ಹಲವು ಕನ್ನಡ ಸುದ್ದಿವಾಹಿನಿಗಳಲ್ಲಿ ವರದಿ ಕೂಡ ಪ್ರಕಟವಾಗಿತ್ತು .ಈ ಎಲ್ಲಾ ಬೆಳವಣಿಗೆಯಿಂದ ತನ್ನ ನೆಚ್ಚಿನ ಅಭಿಮಾನಿಯನ್ನ ಭೇಟಿಯಾಗಲು ನಟ ಶಿವರಾಜ್ ಕುಮಾರ್ ಮುಂದಾಗಿದ್ದಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ತನ್ನ ನಿವಾಸಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದರೆ ಅಭಿಮಾನಿ ಜೊತೆ ಸಮಯ ಕಳೆಯಲು ಸಾಧ್ಯವಾಗುದಿಲ್ಲ, ಹೀಗಾಗಿ ತಮ್ಮ ನಿವಾಸದಲ್ಲಿ ಅಭಿಮಾನಿ ಜೊತೆ ಸ್ವಲ್ಪ ಸಮಯ ಕಳೆಯಲು ಚಿಂತಿಸಿರುವ ಹ್ಯಾಟ್ರಿಕ್ ಹೀರೋ ಆತನ ಚಿಕಿತ್ಸಾ ವೆಚ್ಚ ಭರಿಸುವುದಾಗಿಯೂ ತಿಳಿಸಿದ್ದಾರೆ.
-suvarana news
loading...
No comments