Breaking News

ಇಸ್ಲಾಮಿಕ್ ಸ್ಟೇಟ್‌ ಜತೆ ಸಂಪರ್ಕ 3 ಶಂಕಿತ ಉಗ್ರರ ಸೆರೆನವದೆಹಲಿ :  ಜಾಗತಿಕ ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ ಜತೆ ಸಂಪರ್ಕ ಹೊಂದಿದ್ದಾರೆಂಬ ಮೂವರು ಶಂಕಿತ ಭಯೋತ್ಪಾದಕರನ್ನು ಉತ್ತರಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಇಂದು ಬಂಧಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿಗಳು ಐಸಿಸ್ ಮಾದರಿಯ ಭಯೋತ್ಪಾದಕ ಸಂಘಟನೆಯ ಒಂದು ಭಾಗವಾಗಿ ಇದ್ದಾರೆಂದು ಹೇಳಲಾಗಿದ್ದು, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದಲ್ಲಿ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದರು ಎಂದು ಹೇಳಲಾಗಿದೆ.
5 ರಾಜ್ಯಗಳಲ್ಲಿ ಪೊಲೀಸ್ ತಂಡಗಳು ನಡೆಸಿದ ಜಂಟಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರಪ್ರದೇಶದ ಎಸ್‌ಟಿಎಫ್ ತಂಡ ಜಲಂಧರ್, ಮುಂಬೈ, ಬಿಜನೂರ್‌ಗಳಿಂದ ಮೂವರು ಭಯೋತ್ಪಾದಕರನ್ನು ಬಂಧಿಸಿದೆ.
ಈ ಪ್ರಕರಣ ಸಂಬಂಧ ಇನ್ನೂ 6 ಮಂದಿಯನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
loading...

No comments