ಪೊಲೀಸ್ ಇಲಾಖೆಯ ಸೇವೆಗಳಲ್ಲಿ ಸತಾಯಿಸಿದರೆ ಪೊಲೀಸರಿಗೆ ಬೀಳಲಿದೆ ದಂಡ
ನವದೆಹಲಿ : ಪೊಲೀಸರು 20 ದಿನದೊಳಗೆ ನಿಮ್ಮ ಪಾಸ್‌ಪೋರ್ಟ್ ವೆರಿಫಿಕೇಶನ್ ನಡೆಸದಿದ್ದರೆ ಅವರ ಮೇಲೆ 250 ರೂ. ನಿಂದ 5000ರೂ. ವರೆಗೂ ದಂಡ ವಿಧಿಸುವಂತೆ ಪ್ರಸ್ತಾವನೆಯೊಂದು ಕೇಂದ್ರ ಸರಕಾರದ ಕದ ತಟ್ಟಿದೆ.
ಪೊಲೀಸ್ ಇಲಾಖೆ ಹಾಗೂ ಅಲ್ಲಿನ ಸೇವೆಗಳಲ್ಲಿ ಶಿಸ್ತು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆಂಡ್ ಡೆವಲಪ್ವೆುಂಟ್ (ಬಿಪಿಆರ್&ಡಿ) ಕೆಲವು ಮಹತ್ವದ ಪ್ರಸ್ತಾವನೆಯನ್ನು ಕೇಂದ್ರದ ಮುಂದಿಟ್ಟಿದ್ದು ಇದರಲ್ಲಿ ಪಾಸ್‌ಪೋರ್ಟ್ ಸೇವೆ ಕೂಡಾ ಒಂದು.
ಪೊಲೀಸರು 20 ದಿನಗಳ ಒಳಗಾಗಿ ಪಾಸ್‌ಪೋರ್ಟ್ ಪರಿಶೀಲನೆ ಪೂರ್ಣಗೊಳಿಸದಿದ್ದಲ್ಲಿ, ದೂರು ದಾಖಲಿಸಿದ ದಿನದಂದೇ ಎಫ್ಐಆರ್ ಪ್ರತಿ ನೀಡದಿದ್ದಲ್ಲಿ ಅಥವಾ ನಿಯಮಾನುಸಾರ ಪ್ರಕರಣ ಇತ್ಯರ್ಥವಾದ ಮೇಲೂ ಜಪ್ತಿಯಾದ ವಾಹನಗಳನ್ನು ಬಿಡುಗಡೆ ಮಾಡದಿದ್ದಲ್ಲಿ ಅಂತಹ ಪೊಲೀಸರಿಗೆ 5000 ರೂ. ಅಥವಾ ದಿನಕ್ಕೆ 250 ರೂ.ನಂತೆ ದಂಡ ವಿಧಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಬಿಪಿಆರ್ಎನ್ಡಿ ಸಂಸ್ಥೆಯು, ಪೊಲೀಸರು ಸಾರ್ವಜನಿಕರಿಗೆ ನೀಡಬೇಕಾದ 45 ಸೇವೆಗಳ ಪಟ್ಟಿಯನ್ನು ಸಿದ್ಧ ಪಡಿಸಿದ್ದು. ಈ ಸೇವೆಗಳಲ್ಲಿ ಒಂದು ವೇಳೆ ಲೋಪವೆಸಗಿದರೆ ದಂಡ ವಿಧಿಸುವಂತೆ ಶಿಫಾರಸ್ಸು ಸಲ್ಲಿಸಿದೆ.
-via vijayakaranataka
loading...
No comments