ಮಹಿಳೆ ಒಬ್ಬರನ್ನು ಸಜೀವ ದಹನಗೈದ ಕಟುಕರು
ವಿಜಯಪುರ :ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಪತಿ ಮತ್ತು ಸವತಿ ಸೇರಿಕೊಂಡು ಸಜೀವವಾಗಿ ಸುಟ್ಟು ಹಾಕಿದ ಅಮಾನುಷ ಘಟನೆ ನಡೆದಿದೆ.
ಮಂಜುಳಾ ಚನ್ನಪ್ಪ ಭಾಸಗಿ (45) ಎಂಬುವವರೆ ಈ ಕುಕೃತ್ಯಕ್ಕೆ ಬಲಿಯಾದ ಮಹಿಳೆ. ಮಂಜುಳಾರನ್ನು ಅವರ ಪತಿ ಚನ್ನಪ್ಪ ಭಾಸಗಿ ಮತ್ತು ಅವರ ಎರಡನೆಯ ಪತ್ನಿ ಗಂಗಾಬಾಯಿ ಸೇರಿಕೊಂಡು ತೋಟದ ಮನೆಯಲ್ಲಿ ಸುಟ್ಟು ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ನಡೆದ ಬಳಿಕ ಪತಿ ಚನ್ನಪ್ಪ ಹಾಗೂ ಆತನ ಎರಡನೆಯ ಪತ್ನಿ ಗಂಗಾಬಾಯಿ ಪರಾರಿಯಾಗಿದ್ದಾರೆ
ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದವರ ಶೋಧಕ್ಕೆ ವ್ಯಾಪಕ ಬಲೆ ಬೀಸಲಾಗಿದೆ
loading...
No comments