ಪತ್ರಕರ್ತರ ಮೇಲೆ ದಾಳಿಗೆ ಸಂಚು ನಡೆಸಿದ ರುದ್ರೇಶ್ ಹತ್ಯೆ ಆರೋಪಿಗಳು: ಎನ್'ಐಎ ತನಿಖೆಯಲ್ಲಿ ಬಹಿರಂಗ
ಬೆಂಗಳೂರು : ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳು ಐವರು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವುದು ಎನ್‌ಐಎ ತನಿಖೆಯಿಂದ ಬಹಿರಂಗವಾಗಿದೆ.ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್, ವಿಜಯಸಂಕೇಶ್ವರ ಸೇರಿದಂತೆ ಐವರ ಮೇಲೆ ದಾಳಿ ಎಸಗಲು ಈ ಆರೋಪಿಗಳು ಯೋಜಿಸಿದ್ದರೆನ್ನಲಾಗಿದೆ. ಈ ಸಂಬಂಧ ಎನ್'ಐಎ ಅಧಿಕಾರಿಗಳು ಸದ್ಯದಲ್ಲೇ ಕೋರ್ಟ್'ನಲ್ಲಿ ಚಾರ್ಜ್'ಶೀಟ್ ಸಲ್ಲಿಸಲಿದ್ದಾರೆ.
ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಇರ್ಫಾನ್, ವಾಸೀಮ್, ನಜರ್ ಮುಸಿಬುಲ್ಲಾ, ಅಸೀಫ್ ಷರೀಫ್ ಅವರು ಬಂಧಿತರಾಗಿದ್ದಾರೆ. ಈ ಆರೋಪಿಗಳು ಇಂಡಿಯನ್ ಮುಜಾಹಿದೀನ್ ಮತ್ತು ಅಲ್ ಉಮ್ಮಾ ಮೊದಲಾದ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದೂ ತನಿಖೆ ವೇಳೆ ತಿಳಿದುಬಂದಿದೆ. ಪ್ರಮುಖ ಆರೋಪಿ ಅಸೀಫ್ ಷರೀಫ್ ಎಸ್'ಡಿಪಿಐ ಸಂಘಟನೆಯ ಅಧ್ಯಕ್ಷ ಕೂಡ ಹೌದು. ಅಲ್ಲದೆ, ಈ ಆರೋಪಿಗಳು ಬೆಂಗಳೂರು, ಮಂಗಳೂರು ಮತ್ತು ಕೇರಳದಲ್ಲಿ 6ಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ.
loading...
No comments