Breaking News

ನೂತನ ಪೊಲೀಸ್ ಕಮಿಷನರ್ ಸತೀಶ ಕುಮಾರ್ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರುಗಳು


ಮಂಗಳೂರು: ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರ ವರ್ಗಾವಣೆ ಆದೇಶ ಹೊರ ಬಿದ್ದ ನಂತರ ನೂತನ ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಅವರು ಮಂಗಳೂರಿನ ಪೊಲೀಸ್ ಕಮಿಷನರ್ ಹುದ್ದೆಗೆ ನೇಮಕಗೊಂಡಿದ್ದರು.
‌ಇದೀಗ ನೂತನ ಪೊಲೀಸ್ ಕಮಿಷನರ್   ಸತೀಶ ಕುಮಾರ್ ನೇಮಕಕ್ಕೆ  ಸಚಿವ ಯು. ಟಿ ಖಾದರ್ ಮತ್ತು ಮಂಗಳೂರಿನ ಇತರ ಕಾಂಗ್ರೆಸ್ ನಾಯಕರುಗಳು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರು ನೀಡಿದ್ದಾರೆ. ಯುಟಿ ಖಾದರ್ ನೇತ್ರತ್ವದ ಮಂಗಳೂರು ಕಾಂಗ್ರೆಸ್ ನಾಯಕರುಗಳು ನೀಡಿದ ದೂರಿನಲ್ಲಿ 2008 ರಲ್ಲಿ ನಡೆದ  ಮಂಗಳೂರು ಚರ್ಚ್ ದಾಳಿ ಸಂದರ್ಭದಲ್ಲಿ ಪೂಜ ನಿರತವರ ಮೇಲೆ ಪೊಲೀಸ್ ದೌಜನ್ಯ ನಡೆಸಿದ ಸಂದರ್ಭದಲ್ಲಿ ಸತೀಶ್ ಕುಮಾರ್ ಜಿಲ್ಲಾ ಎಸ್ಪಿಯಾಗಿದ್ದು ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿದ್ದರು ಇವರನ್ನು ಮಂಗಳೂರು ನೂತನ ಪೊಲೀಸ್ ಕಮಿಷನರ್ ನೇಮಿಸಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗುರುವಾರ ಮೇ 25 ರಂದು ಸರಕಾರ ನೀಡಿದ ಆದೇಶದಂತೆ  ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರ ಸ್ಥಾನಕ್ಕೆ ಸತೀಶ್ ಕುಮಾರ್ ನೇಮಿಸಬೇಕಾಗಿದೆ. ಇದೀಗ ನಡೆದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಮಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಸತೀಶ್ ಕುಮಾರ್ ಬದಲಿಗೆ ಮತ್ತೊಂದು ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

No comments