ಜಲೀಲ್ ಪ್ರಕರಣ ಹಿಂದು ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ
ವಿಟ್ಲ: ಕರೋಪಾಡಿ ಗ್ರಾಮ ಪಂಚಾಯತು ಉಪಾಧ್ಯಕ್ಷ ಜಲೀಲ್ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಹಿಡಿಯುವ ಬದಲು ಅಮಾಯಕ ಹಿಂದು ಮನೆಯವರಿಗೆ ಕಿರುಕುಳ, ಹಿಂದು ಯುವಕರ ಮೇಲೆ ದೌರ್ಜನ್ಯ ಪೋಲೀಸ್ ಇಲಾಖೆ ಮಾಡುತ್ತಿರುವುದರ ವಿರುದ್ದ, ಜನಜಾಗೃತಿಗಾಗಿ ಈ ಪ್ರತಿಭಟನೆ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಹೇಳಿದರು.
ನಿನ್ನೆ ಹಿಂದು ಹಿತರಕ್ಷಣಾ ಸಮಿತಿ ಬಂಟ್ವಾಳ ತಾಲೂಕು ಇದರ ವತಿಯಿಂದ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಜರುಗಿದ ಪ್ರತಿಭಟನೆ ಹಾಗೂ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಯುವ ಸಮಾಜವನ್ನು ದಾರಿತಪ್ಪಿಸಲು ಗಾಂಜಾ ಮಾರಾಟ, ಹೆಣ್ಣು ಮಕ್ಕಳ ಮಾರಾಟ ಜಾಲ, ಮರಳು ಮಾಫಿಯಾ, ಗೋ ಕಳ್ಳ ಸಾಗಾಣಿಕೆಯೇ ಮುಂತಾದುವು ಕರೋಪಾಡಿಯಲ್ಲಿ ನಿತ್ಯ ನಿರಂತರ ನಡೆಯತ್ತಿತ್ತು. ಜಲೀಲ್ ಅವರ ಮುಂದೆಯೇ ರಾಜಾ ರೋಷವಾಗಿ ನಡೆಯುತ್ತಿತ್ತು. ಇದನ್ನು ವಿರೋದಿಸಿದ್ದ ಜಾಗರಣ ವೇದಿಕೆಯ ರಾಜೇಶ್ ಅವರ ಮೇಲೆ ಬೆದರಿಕೆ ಒಡ್ಡಲಾಯಿತು. ಹತ್ಯೆಯ ಬಳಿಕ ಹಿಂದೂ ನಾಯಕರ ಮೇಲೆ ಆರೋಪ ಪಟ್ಟ ಕಟ್ಟಿ ದೌರ್ಜನ್ಯವೆಸಗಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮತ್ತು ಗೃಹ ಸಚಿವರು ಜಲೀಲ್ ಮನೆಗೆ ಬಂದು ಹೋದ ಮೇಲೆ ಉಸ್ಮಾನ್ ಕರೋಪಾಡಿ ಪತ್ರಿಕಾ ಗೋಷ್ಠಿ ನಡೆಸಿ ಅಮಾಯಕ ಹಿಂದೂಗಳ ಹೆಸರನ್ನು ಹೇಳಿದರು. ಆರೋಪಿಗಳಪಟ್ಟಿಯಲ್ಲಿ ೪ ಮಂದಿ ಇದ್ದದ್ದು ೭ ಆಯಿತು. ಕಾನೂನಿನ ರಕ್ಷಣೆ ಮಾಡ ಬೇಕಾದ ಪೋಲೀಸರೇ ಕಾನೂನು ಮೀರಿ ವರ್ತಿಸಿ, ಅಮಾಯಕ ಬಡ ಹಿಂದೂ ಮನೆಗಳಿಗೆ ಹೊಕ್ಕಿ ಬೆದರಿಸಿದ, ಹಿಂದೂ ಮುಖಂಡರೊಂದಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದುದರ ವಿರುದ್ದವೂ ಈ ಪ್ರತಿಭಟನೆ ಎಂದು ಪೋಲೀಸ್ ಇಲಾಖೆಯ ಲಜ್ಜೆಗೆಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹಿಂದು ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಪ್ರಸ್ತಾವಿಸಿ ಕರೋಪಾಡಿ ಜಲೀಲ್ ಹತ್ಯೆಯನ್ನು ನೆಪವಾಗಿಟ್ಟು ಹಿಂದು ಸಮಾಜದ ಯುವಕರ ಮೇಲೆ ದೌರ್ಜನ್ಯ ವೆಸಗುತ್ತಿರುವುದನ್ನು ಸಂವಿಧಾನಾತ್ಮಕವಾಗಿ ಪ್ರತಿಭಟಿಸುತ್ತಿದ್ದೇವೆ. ಉಸ್ತುವಾರಿ ಸಚಿವರ ದಿಕ್ಕು ತಪ್ಪಿಸುವ ಹೇಳಿಕೆಯ ವಿರುದ್ದವೂ ಈ ಹೋರಾಟವಾಗಿದೆ. ಅಮಾಯಕರಮೇಲೆ ಯಾವುದೇ ಕಿರುಕುಳ, ದೌರ್ಜನ್ಯ ವೆಸಗದೇ ಪೋಲೀಸ್ ಇಲಾಖೆ ನೈಜ ಆರೋಪಿಗಳನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಪ್ರತಿಭಟನೆ ಎಚ್ಚರಿಸುತ್ತಿದೆ ಎಂದೂ ಅವರು ಹೇಳಿದರು.
ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ, ಜೀವಂದರ ಜೈನ್, ಮುರಳಿಕೃಷ್ಣ ಹಸಂತಡ್ಕ, ಅಶೋಕ ಕುಮಾರ ರೈ ಕೋಡಿಂಬಾಡಿ ವಿಟ್ಲ ಪಟ್ಟಣ ಪಂಚಾಯತು ಅಧ್ಯಕ್ಷ ಅರುಣ ಎಂ. ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯರುಗಳು ಮುಂತಾದ ಪ್ರಮುಖರು ಭಾಗವಹಿಸಿದ್ದರು. ಮಹಿಳೆಯರು ಸೇರಿದಂತೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸರಕಾರಿ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡು ಸಭೆ ನಡೆಯಿತು. ಗಣರಾಜ ಭಟ್ ಕೆದಿಲ ಕಾರ್ಯಕ್ರಮ ನಿರೂಪಿಸಿದರೆ. ವಿಟ್ಲ ಪ್ರಖಂಡ ವಿಹಿಂಪದ ಕೃಷ್ಣಪ್ಪ ಕಲ್ಲಡ್ಕ ವಂದಿಸಿದರು. ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಹಾಗೂ ಪೋಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸರಕಾರಿ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡು ಸಭೆ ನಡೆಯಿತು.
No comments