Breaking News

198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಬಿಬಿಎಂಪಿ ಸಿದ್ಧತೆ



ಬೆಂಗಳೂರು :ನಗರದ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಬಿಬಿಎಂಪಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ.
ನಗರದಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್ ನಡೆಸಲು ಸ್ಥಳ ಗುರುತಿಸಲಾಗಿದೆ.
ಪ್ರತಿ ಕ್ಯಾಂಟಿನ್ ಆರಂಭಕ್ಕೆ ಒಟ್ಟು 28.50 ಲಕ್ಷ ರೂ. ತಗುಲಲಿದೆ ಕ್ಯಾಂಟಿನ್‌ನ ಅಡುಗೆ ಮನೆ, ಒಳಚರಂಡಿ, ವಿದ್ಯುತ್ ದೀಪ, ಶೌಚಾಲಯ, ಟೇಬಲ್‌ಗಳು ಹಾಗೂ ಇತರ ಪರಿಕರಗಳು ಇಂದಿರಾ ಕ್ಯಾಂಟಿನ್‌ನಲ್ಲಿರುತ್ತದೆ.
ಇಂದಿರಾ ಕ್ಯಾಂಟಿನ್ ಅನ್ನು ಸಿದ್ಧಪಡಿಸುವ ಖಾಸಗಿ ಸಂಸ್ಥೆಯು ಸಧ್ಯದಲ್ಲಿಯೆ ಕ್ಯಾಂಟಿನ್‌ಗೆ ಅಗತ್ಯವಾದ ಪರಿಕರಗಳನ್ನು ಜೋಡಣೆ ಮಾಡಲಿದೆ.
ಪ್ರತಿದಿನ 8 ಇಂದಿರಾ ಕ್ಯಾಂಟಿನ್‌ನ್ನು ಸಜ್ಜುಗೊಳಿಸುವ ಸಂಸ್ಥೆ 20 ದಿನದೊಳಗೆ ಎಲ್ಲ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್‌ನ್ನು ಸುಸಜ್ಜಿತವಾಗಿ ಪೂರ್ಣಗೊಳಿಸಲಿದೆ
ತಮಿಳುನಾಡಿನಲ್ಲಿರುವ ಅಮ್ಮಾ ಕ್ಯಾಂಟಿನ್ ಮಾದರಿಯಲ್ಲಿಯೇ ಇಂದಿರಾ ಕ್ಯಾಂಟಿನ್‌ನ್ನು ಸಿದ್ಧಪಡಿಸಲಾಗುವುದು ಎಂದು ಮೇಯರ್ ಜಿ. ಪದ್ಮಾವತಿ ತಿಳಿಸಿದ್ದಾರೆ.

No comments